ಸೂಚ್ಯಂಕ 90 ಪಾಯಿಂಟ್ ಏರಿಕೆ
ಮುಂಬೈ, ಶುಕ್ರವಾರ, 28 ಆಗಸ್ಟ್ 2009( 13:01 IST )
ಏಳನೇ ನೇರ ಸೆಷನ್‌ನಲ್ಲಿ ತನ್ನ ವಿಜಯದ ಗೆರೆಯನ್ನು ಮುಂದುವರಿಸಿದ ಮುಂಬೈ ಷೇರುಪೇಟೆ ಸೂಚ್ಯಂಕ, ವಿದೇಶಿ ಹಣಕಾಸು ಸಂಸ್ಥೆಗಳು ಹೆಚ್ಚು ಹಣವನ್ನು ಸುರಿದಿದ್ದರಿಂದ ಆರಂಭದ ವಹಿವಾಟಿನಲ್ಲಿ 90 ಪಾಯಿಂಟ್ ಗಳಿಸಿತು.
ಜಾಗತಿಕ ಪೇಟೆಗಳಲ್ಲಿ ಸ್ಥಿರ ಪ್ರವೃತ್ತಿಯಿಂದ ಕೂಡ ವಹಿವಾಟಿಗೆ ಚೇತರಿಕೆ ನೀಡಿತು. 30 ಷೇರು ಸೂಚ್ಯಂಕವು 90.45 ಪಾಯಿಂಟ್ ಏರಿಕೆಯಾಗಿ, 15,871.52ಕ್ಕೆ ಮುಟ್ಟಿತು.
ಕೈಗಾರಿಕೆ ಉತ್ಪನ್ನ ಜುಲೈನೊಳಗೆ ಶೇ.7ರಷ್ಟು ಬೆಳೆದಿದ್ದರಿಂದ ದೇಶೀಯ ಪೇಟೆಯಲ್ಲಿ ಖರೀದಿ ಚಟುವಟಿಕೆಗೆ ಚಾಲನೆ ಸಿಕ್ಕಿತೆಂದು ದಳ್ಳಾಳಿಗಳು ಹೇಳಿದ್ದಾರೆ.