ಖಾಸಗಿ ವಿಮಾನಯಾನ ಸಂಸ್ಥೆ ಜೆಟ್ ಏರ್‌ವೇಸ್ ಸೆಪ್ಟೆಂಬರ್ ಮಧ್ಯಭಾಗದಿಂದ ಮುಂಬೈ-ಢಾಕಾ ನಡುವೆ ದಿನಂಪ್ರತಿ ನೇರ ಹಾರಾಟ ಸೇವೆ ಆರಂಭಿಸುವುದಾಗಿ ತಿಳಿಸಿದೆ.
ಢಾಕಾ-ಮುಂಬೈ ನಡುವೆ ವೈಮಾನಿಕ ಸೇವೆಯು ಉದ್ಯಮ ಅಥವಾ ಪ್ರವಾಸಿಗರಿಗೆ ಅತ್ಯುತ್ತಮವಾಗಿದೆ ಎಂದು ಬಾಂಗ್ಲಾದೇಶ ವೈಮಾನಿಕ ಉದ್ಯಮ ಪ್ರತಿಕ್ರಿಯಿಸಿದೆ.
ಗಲ್ಫ್ ರಾಷ್ಟ್ರದಿಂದ ಮತ್ತು ಗಲ್ಫ್ ರಾಷ್ಟ್ರಕ್ಕೆ ಬಾಂಗ್ಲಾದೇಶದ ಪ್ರಯಾಣಿಕರನ್ನು ಮುಂಬೈ ಮೂಲಕ ಸಾಗಿಸುವ ಗುರಿಯನ್ನು ಜೆಟ್ ಹೊಂದಿರಬಹುದು ಎಂದು ಬಾಂಗ್ಲಾದೇಶದ ಖಾಸಗಿ ವಿಮಾನಯಾನ ಸಂಸ್ಥೆಯ ಹಿರಿಯ ಅಧಿಕಾರಿಯೊಬ್ಬರು ನ್ಯೂ ಏಜ್ ಪತ್ರಿಕೆಗೆ ತಿಳಿಸಿದ್ದಾರೆ.
ಮುಂಬೈ-ಢಾಕಾ ಸೇವೆಯನ್ನು ಆರಂಭದೊಂದಿಗೆ ಬಾಂಗ್ಲಾದೇಶದ ಪ್ರಯಾಣಿಕರು ಮುಂಬೈ ಮತ್ತು ದೆಹಲಿ ಮೂಲಕ ಜೆಟ್ ಏರ್‌ವೇಸ್‌ನ ವಿಮಾನಗಳಲ್ಲಿ ಉತ್ತರ ಅಮೆರಿಕಾ, ಯೂರೋಪ್ ಮತ್ತು ಗಲ್ಫ್ ಸೇರಿದಂತೆ ಏಸಿಯಾನ್ ರಾಷ್ಟ್ರಗಳಿಗೆ ಪ್ರಯಾಣಿಸಬಹುದಾಗಿದೆ ಎಂದು ಜೆಟ್ ಏರ್‌ವೇಸ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಢಾಕಾ-ಮುಂಬೈ ಮಾರ್ಗದಲ್ಲಿ ಜೆಟ್ ಏರ್‌ವೇಸ್ ಸೇವೆ ಆರಂಭವಾಗುವುದರೊಂದಿಗೆ ಬಾಂಗ್ಲಾದೇಶ ಮತ್ತು ಭಾರತದ ನಡುವೆ ಈ ಸಂಸ್ಥೆಯ ಮೂರನೇ ದಿನನಿತ್ಯದ ಸೇವೆ ಪ್ರಾರಂಭಿಸಿದಂತಾಗುತ್ತದೆ.
ಪ್ರಸಕ್ತ ಜೆಟ್ ಏರ್‌ವೇಸ್ ದೆಹಲಿ ಮತ್ತು ಕೊಲ್ಕತ್ತಾದಿಂದ ಢಾಕಾಕ್ಕೆ ವೈಮಾನಿಕ ಸೇವೆಯನ್ನು ಒದಗಿಸುತ್ತಿದೆ.