ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಅಮೆರಿಕಾ ಘಟಕ ಮುಚ್ಚಲಿರುವ ವರ್ಲ್‌ಪೂಲ್; ಸಾವಿರ ನೌಕರಿ ನಷ್ಟ (Whirlpool | US plant | Indiana | Mexico)
 
ವರ್ಲ್‌ಪೂಲ್ ಕಾರ್ಪೊರೇಷನ್ ಇಂಡಿಯಾನ ರಾಜ್ಯದ ಇವಾನ್ಸ್‌ವಿಲ್ಲೆ ಉತ್ಪಾದನಾ ಘಟಕವನ್ನು ಮುಚ್ಚಲಿದ್ದು, ಇದರಿಂದಾಗಿ 1,100 ಅಮೆರಿಕನ್ ನೌಕರರು ಕೆಲಸ ಕಳೆದುಕೊಳ್ಳಲಿದ್ದಾರೆ.

ಗೃಹೋಪಯೋಗಿ ಎಲೆಕ್ಟ್ರಿಕಲ್ ವಸ್ತುಗಳನ್ನು ತಯಾರಿಸುವ ಸಂಸ್ಥೆ ವರ್ಲ್‌ಪೂಲ್ ಅಮೆರಿಕಾದಿಂದ ತನ್ನ ಘಟಕವನ್ನು ಮೆಕ್ಸಿಕೋಗೆ ವರ್ಗಾಯಿಸುವ ಬಗ್ಗೆ ಯೋಚನೆ ನಡೆಸುತ್ತಿದೆ. ಅದಕ್ಕಾಗಿ ಇವಾನ್ಸ್‌ವಿಲ್ಲೆಯಲ್ಲಿನ ಸ್ಥಾವರವನ್ನು ಮುಂದಿನ ವರ್ಷದೊಳಗೆ ಮುಚ್ಚುವ ಯೋಜನೆಯಿದೆ ಎಂದು ಸಂಸ್ಥೆ ಹೇಳಿಕೊಂಡಿದೆ.

ಇದರಿಂದಾಗಿ ಸಾವಿರಕ್ಕೂ ಹೆಚ್ಚು ಅಮೆರಿಕಾ ಉದ್ಯೋಗಿಗಳು ನಿರುದ್ಯೋಗಿಗಳಾಗಲಿದ್ದಾರೆ. ಆದರೆ ಸಂಸ್ಥೆಯ 2009ರ ಸ್ಥಿತಿಗತಿಗೆ ಇದು ಯಾವುದೇ ತೊಂದರೆಯನ್ನುಂಟು ಮಾಡದು ಎಂದು ಸಂಸ್ಥೆ ಹೇಳಿಕೊಂಡಿದೆ.

ಪ್ರಸಕ್ತ ಶೀತಲೀಕರಣ ಉಪಕರಣಗಳನ್ನು ಅಮೆರಿಕಾದಲ್ಲಿ ತಯಾರಿಸಲಾಗುತ್ತಿದ್ದು, ಅದನ್ನು ಮೆಕ್ಸಿಕೋಗೆ ವರ್ಗಾಯಿಸಲಾಗುತ್ತದೆ. ಆದರೆ ಇದಕ್ಕಿನ್ನೂ ಸ್ಥಳ ಗುರುತಿಸಲಾಗಿಲ್ಲ. ಕಂಪನಿಯ ಯಾವುದಾದರೊಂದು ಭಾಗದಲ್ಲಿ ಈ ಘಟಕವನ್ನು ತೆರೆಯಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಅಮೆರಿಕಾದ ಮಿಚಿಗನ್‌ನಲ್ಲಿ ತನ್ನ ಪ್ರಧಾನ ಕಚೇರಿ ಹೊಂದಿರುವ ವರ್ಲ್‌ಪೂಲ್ ವಿಶ್ವದಾದ್ಯಂತ 70,000 ನೌಕರರನ್ನು ಹೊಂದಿದೆ. 1911ರಲ್ಲಿ ಈ ಸಂಸ್ಥೆಯನ್ನು ಸ್ಥಾಪಿಸಲಾಗಿತ್ತು.
• Play Free Online Games Click Here
• Blogs, Videos and More Click Here
• Send Musical and Animated Cards Click Here
• Simple,Fast & Free Email Service Click Here
ಸಂಬಂಧಿತ ಮಾಹಿತಿ ಹುಡುಕಿ