ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಎಂಎಸ್‌ಎಂಇ ಉದ್ಯಮ ಸಾಲ ದ್ವಿಗುಣ: ಪ್ರಧಾನಿ ಭರವಸೆ (MSME | India | PM | Manmohan Singh)
 
ಆರು ಕೋಟಿ ಮಂದಿಗೆ ಉದ್ಯೋಗ ನೀಡಿರುವ ಮತ್ತು ದೇಶದ ಉತ್ಪಾದನಾ ಸರಕುಗಳಿಗೆ ಶೇ.45ರ ಕೊಡುಗೆ ನೀಡುವ ಕಿರು, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ನೀಡಲಾಗುವ ಸಾಲವನ್ನು ದ್ವಿಗುಣಗೊಳಿಸುವ ನಿರ್ಧಾರಕ್ಕೆ ಸರಕಾರ ಬದ್ಧವಾಗಿದೆ ಎಂದು ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ತಿಳಿಸಿದ್ದಾರೆ.

ಸಾಲ ಎನ್ನುವುದು ವ್ಯವಹಾರದಲ್ಲಿ ಅತಿ ಪ್ರಮುಖವಾದುದು. ಮುಂದಿನ ಐದು ವರ್ಷಗಳ ಅವಧಿಯಲ್ಲಿ ಕಿರು, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ (ಎಂಎಸ್‌ಎಂಇ) ನೀಡಲಾಗುವ ಸಾಲದಲ್ಲಿ ದ್ವಿಗುಣಗೊಳಿಸುವ ನಿರ್ಧಾರಕ್ಕೆ ಸರಕಾರ ಬದ್ಧವಾಗಿದೆ ಎಂದು ಉದ್ಯಮ ಮಂದಿಗೆ ರಾಷ್ಟ್ರೀಯ ಪ್ರಶಸ್ತಿಗಳನ್ನು ವಿತರಿಸಿದ ನಂತರ ಮಾತನಾಡುತ್ತಾ ಸಿಂಗ್ ತಿಳಿಸಿದರು.

ಈ ಕೈಗಾರಿಕಾ ವಲಯಗಳು ಎದುರಿಸುತ್ತಿರುವ ಸಮಸ್ಯೆಗಳು ಮತ್ತು ನಿರ್ವಹಣೆಯನ್ನು ಉದ್ಯಮ ಮಂದಿಯ ಜತೆ ಸೇರಿ ವಿಮರ್ಶೆ ನಡೆಸಿದ ಪ್ರಧಾನಿ, 2008-09ರ ಅವಧಿಯಲ್ಲಿ ಸಾರ್ವಜನಿಕ ಸ್ವಾಮ್ಯದ ಬ್ಯಾಂಕುಗಳು ಎಂಎಸ್‌ಎಂಇಗಳಿಗೆ ನೀಡುವ ಸಾಲವನ್ನು ಶೇ.25ರಷ್ಟು ಹೆಚ್ಚಿಸಿವೆ ಎಂದರು.

ಅಂದಾಜು ಲೆಕ್ಕಾಚಾರದ ಪ್ರಕಾರ ಎಂಎಸ್‌ಎಂಇಗಳಿಗೆ ಸರಕಾರಿ ಸ್ವಾಮ್ಯದ ಬ್ಯಾಂಕುಗಳು ವಾರ್ಷಿಕ 1,50,000 ಕೋಟಿ ರೂಪಾಯಿ ಸಾಲ ನೀಡಿವೆ. ರಫ್ತು ಉದ್ಯಮಕ್ಕೆ ಶೇ.40ರ ಕೊಡುಗೆ ನೀಡುವ ಈ ವಲಯದ ಸಂಖ್ಯೆ 2.60 ಕೋಟಿ ಎನ್ನಲಾಗಿದೆ.

ಎಂಎಸ್ಎಂಇಗಳು ಎದುರಿಸುತ್ತಿರುವ ಸಮಸ್ಯೆಗಳತ್ತ ಗಮನ ಹರಿಸಲು ಪ್ರಧಾನಿಯವರು ಸಮಿತಿಯೊಂದನ್ನು ರಚಿಸಿದ್ದು, ಮುಂದಿನ ಮೂರು ತಿಂಗಳುಗಳೊಳಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಿದರು.

ಭಾರತೀಯ ಅರ್ಥ ವ್ಯವಸ್ಥೆಯ ಪ್ರಗತಿಯ ಮೇಲೆ ಇತ್ತೀಚಿನ ಜಾಗತಿಕ ಹಿಂಜರಿತವು ವ್ಯತಿರಿಕ್ತ ಪರಿಣಾಮ ಬೀರಿದೆ ಎಂದೂ ಸಿಂಗ್ ಅಭಿಪ್ರಾಯಪಟ್ಟರು. 'ಕಿರು, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಕೂಡ ಇದರಿಂದ ಹೊರತಾಗಿಲ್ಲ' ಎಂದ ಅವರು, ಈ ಬಗ್ಗೆ ಸರಕಾರ ಕಾಳಜಿ ವಹಿಸುತ್ತಿದೆ ಎಂದರು.
• Play Free Online Games Click Here
• Blogs, Videos and More Click Here
• Send Musical and Animated Cards Click Here
• Simple,Fast & Free Email Service Click Here
ಸಂಬಂಧಿತ ಮಾಹಿತಿ ಹುಡುಕಿ