ನವದೆಹಲಿ: ದೇಶದ ಅಗ್ರ ಸಾಫ್ಟ್ವೇರ್ ರಫ್ತು ಸಂಸ್ಥೆ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್, ಮುಂದಿನ ಮೂರರಿಂದ ನಾಲ್ಕು ವರ್ಷಗಳಲ್ಲಿ ತನ್ನ ದೇಶೀಯ ಆದಾಯವನ್ನು ಈಗಿರುವುದಕ್ಕಿಂತ ದ್ವಿಗುಣಗೊಳಿಸಲು ಬಯಸುತ್ತಿರುವುದಾಗಿ ತಿಳಿಸಿದೆ. ದೇಶೀಯ ಮಾರುಕಟ್ಟೆಯಲ್ಲಿ 100 ಕೋಟಿ ಅಮೆರಿಕನ್ ಡಾಲರ್ ಆದಾಯ ಹೊಂದುವುದು ತನ್ನ ಗುರಿಯೆಂದು ಸಂಸ್ಥೆ ತಿಳಿಸಿದೆ.