ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅಧ್ಯಕ್ಷತೆ ವಹಿಸಿರುವ ಪೂರ್ಣಸ್ವರೂಪದ ಯೋಜನಾ ಆಯೋಗದ ಸಭೆಯಲ್ಲಿ ಬರ ಮತ್ತು ಆಹಾರಪದಾರ್ಥಗಳ ಬೆಲೆಏರಿಕೆಯಿಂದ ಒತ್ತಡಕ್ಕೆ ಗುರಿಯಾದ ಆರ್ಥಿಕ ಸ್ಥಿತಿಗತಿ ಕುರಿತು ಸೆಪ್ಟೆಂಬರ್ 1ರಂದು
600 ಜಿಲ್ಲೆಗಳಲ್ಲಿ ಈಗಾಗಲೇ 252 ಜಿಲ್ಲೆಗಳಲ್ಲಿ ಬರ ಕರಾಳಬಾಹು ಚಾಚಿದ್ದು, ಆರ್ಥಿಕ ಬೆಳವಣಿಗೆಯನ್ನು ಶೇ.6ಕ್ಕೆ ಕುಂದಿಸಬಹುದಾದ ಅನಾವೃಷ್ಟಿ ನಿಭಾಯಿಸಲು ಕಾರ್ಯತಂತ್ರ ರೂಪಿಸುವುದು ಸೇರಿದಂತೆ ಸಮಗ್ರ ಇಂಧನ ನೀತಿಯನ್ನು ಅನುಷ್ಠಾನಕ್ಕೆ ತರುವ ಬಗ್ಗೆ ಸಭೆಯಲ್ಲಿ ಪರಾಮರ್ಶಿಸಲಾಗುವುದು.
ಯೋಜನಾ ಆಯೋಗದ ಉಪಾಧ್ಯಕ್ಷ ಮಾಂಟೆಕ್ ಸಿಂಗ್ ಅಹ್ಲುವಾಲಿಯ ಮತ್ತು ಪ್ರಣವ್ ಮುಖರ್ಜಿ, ಶರದ್ ಪವಾರ್, ಚಿದಂಬರಂ, ಮುರಳಿ ದೇವೊರಾ ಮತ್ತು ಪ್ರಧಾನಿ ಆರ್ಥಿಕ ಸಲಹೆಗಾರ ಸಿ.ರಂಗರಾಜನ್ ಸಭೆಯಲ್ಲಿ ಭಾಗವಹಿಸಲಿದ್ದಾರೆ.
ಜಾಗತಿಕ ಆರ್ಥಿಕ ಹಿಂಜರಿತದಿಂದ ತತ್ತರಿಸಿರುವ ಆರ್ಥಿಕ ವ್ಯವಸ್ಥೆ ಬರಗಾಲದಿಂದ ನೆಲಕಚ್ಚುವಂತಾಗಿದೆ. ಹಿಂದಿನ ವಿತ್ತೀಯ ವರ್ಷದಲ್ಲಿ ಸಾಧಿಸಿದ್ದ 6.7 ಆರ್ಥಿಕ ಬೆಳವಣಿಗೆ ಈ ವರ್ಷ ಶೇ.6ರ ಸಮೀಪ ಮುಟ್ಟುವುದೆಂದು ಅಂಜಾಜು ಮಾಡಲಾಗಿದೆ.ಬರಗಾಲದಿಂದ ಖಾರಿಫ್ ಬೆಳೆಯ ಇಳುವರಿಯನ್ನು ಶೇ.20ರಷ್ಟು ಕುಂಠಿತಗೊಳಿಸುತ್ತದೆಂದು ವಿತ್ತಸಚಿವ ಪ್ರಣವ್ ಮುಖರ್ಜಿ ಹೇಳಿದ್ದಾರೆ.