ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » 40,000 ರೂಪಾಯಿಗಳನ್ನು ದಾನ ಮಾಡಿದ ಅನಿಲ್ ಅಂಬಾನಿ..! (Anil Ambani | Jagannath temple | Anil Ambani | Kokila Ben)
 
ಕುಟುಂಬಸ್ಥರೊಂದಿಗೆ ಪುರಿ ಜಗನ್ನಾಥ ದೇವಳಕ್ಕೆ ಭೇಟಿ ನೀಡಿದ್ದ ಉದ್ಯಮಿ ಅನಿಲ್ ಅಂಬಾನಿ ಕನಿಷ್ಠ 40,000 ರೂಪಾಯಿಗಳನ್ನು ಬಡ-ಬಗ್ಗರಿಗೆ ದಾನ ಮಾಡಿದ ಅಪರೂಪದ ಪ್ರಸಂಗ ವರದಿಯಾಗಿದೆ.

ತಾಯಿ ಕೋಕಿಲಾ ಬೆನ್, ಸಹೋದರಿ ದೀಪ್ತಿ, ಅನಿಲ್ ಧೀರೂಭಾಯ್ ಅಂಬಾನಿ ಸಮೂಹದ ಅಧ್ಯಕ್ಷ ಹಾಗೂ ಬಾವ ದತ್ತರಾಜ್ ಸಲ್ಗೋಕಾರ್ ಜತೆ ಭಾನುವಾರ ಅನಿಲ್ ಅಂಬಾನಿ 12ನೇ ಶತಮಾನದ ಪ್ರಸಿದ್ಧ ಪುಣ್ಯಕ್ಷೇತ್ರಕ್ಕೆ ಭೇಟಿ ನೀಡಿದ್ದರು.
Anil Ambani with family members
PTI


ಅಪರಾಹ್ನ ವಿಶೇಷ ವಿಮಾನದಲ್ಲಿ ಇಲ್ಲಿನ ಬಿಜು ಪಟ್ನಾಯಕ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಉದ್ಯಮಿ ಕುಟುಂಬ, ಅಲ್ಲಿಂದ ಭಾರೀ ಪೊಲೀಸ್ ಭದ್ರತೆಯೊಂದಿಗೆ ಪುರಿಗೆ ಹೊರಟಿತ್ತು.

ಸಿನಿಮಾಗಳಲ್ಲಿ ನೋಡುವಂತೆ ಅದ್ಧೂರಿಯಾಗಿಯೇ ನಡೆದುಕೊಂಡ ಅನಿಲ್ ಅಂಬಾನಿ, ಹೆದ್ದಾರಿಯಲ್ಲಿ ಎಂಟು ಕಾರುಗಳೊಂದಿಗೆ ತನ್ನ ಪಟಾಲಂ ಹೊತ್ತು ಪ್ರಯಾಣಿಸುತ್ತಿದ್ದರು.

ಈ ಸಂದರ್ಭದಲ್ಲಿ ಸ್ವತಃ ಕಾರನ್ನು ಚಲಾಯಿಸುತ್ತಿದ್ದ ಅನಿಲ್, ಕಾರು ನಿಲ್ಲಿಸಿ ರಸ್ತೆಗಿಳಿದರು. ತೆಂಗಿನಕಾಯಿ ಮಾರಾಟಗಾರರಿಂದ ಕಾಯಿಗಳನ್ನು ಖರೀದಿಸಿದರು. ಅಲ್ಲದೆ ಅವರಿಗೆ ಆಹಾರ ಪೊಟ್ಟಣಗಳನ್ನು ಹಾಗೂ ಇತರೆ ಕೆಲವು ಗಿಪ್ಟ್‌ಗಳನ್ನು ಕೂಡ ಕೊಟ್ಟು ಸಖೇದಾಶ್ಚರ್ಯ ಸೃಷ್ಟಿಸಿದರು.

ಅವರ ಕೊಡುಗೆಗಳು ಅಷ್ಟಕ್ಕೇ ಮುಗಿಯಲಿಲ್ಲ. ಹಣ್ಣು-ಹಂಪಲು ಮಾರಾಟಗಾರರಿಗೆ, ಹಳ್ಳಿಯ ಬಡವರಿಗೆ 'ಪ್ರಸಾದ' ರೂಪದಲ್ಲಿ 1,000 ರೂಪಾಯಿಗಳ ನೋಟುಗಳನ್ನೇ ದಾನ ಮಾಡಿದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

'ನಾನು ಅನಿಲ್ ಅಂಬಾನಿಯವರಿಗೆ 70 ತೆಂಗಿನಕಾಯಿಗಳನ್ನು ಮಾರಾಟ ಮಾಡಿದ್ದೆ. ಅವರು 1,000 ರೂಪಾಯಿ ಹಣದ ಜತೆಗೆ ಸಿಹಿತಿನಸು ಮತ್ತು ಆಹಾರ ಪೊಟ್ಟಣಗಳನ್ನು ನನಗೆ ನೀಡಿದರು' ಎಂದೊಬ್ಬ ವ್ಯಾಪಾರಿ ವಿವರಿಸುತ್ತಾರೆ.

ಇತರ ವ್ಯಾಪಾರಿಗಳಿಗೂ ನಿರಾಸೆ ಮಾಡದ ಅನಿಲ್ ಬಹುತೇಕ ಎಲ್ಲರಿಗೂ 1,000 ರೂಪಾಯಿಗಳ ನೋಟುಗಳನ್ನು ದಾನ ಮಾಡುತ್ತಾ ಸಾಗಿದರು. ಸುಮಾರು 40 ಜನರಿಗೆ ಈ ರೀತಿ ಅವರು ಧನ-ಧಾನ್ಯಗಳನ್ನು ದಾನ ಮಾಡಿದ್ದಾರೆ ಎಂದು ಮತ್ತೊಬ್ಬ ಬೀದಿ ವ್ಯಾಪಾರಿ ತಿಳಿಸಿದ್ದಾರೆ.

ದೇವಳದಲ್ಲಿ ಅಂಬಾನಿ ಕುಟುಂಬ ಸುಮಾರು ಎರಡು ಗಂಟೆಗಳ ಕಾಲ ಪ್ರಾರ್ಥನೆಯಲ್ಲಿ ತೊಡಗಿತ್ತು ಎಂದು ಮೂಲಗಳು ತಿಳಿಸಿವೆ. ಈ ಉದ್ಯಮಿ ಕುಟುಂಬಕ್ಕೆ ಪುಣ್ಯ ಕ್ಷೇತ್ರದಲ್ಲಿ ವಿವಿಐಪಿ ಭದ್ರತೆ ಹಾಗೂ ಸೌಲಭ್ಯಗಳನ್ನು ಒದಗಿಸಲಾಗಿತ್ತು.
• Play Free Online Games Click Here
• Blogs, Videos and More Click Here
• Send Musical and Animated Cards Click Here
• Simple,Fast & Free Email Service Click Here
ಸಂಬಂಧಿತ ಮಾಹಿತಿ ಹುಡುಕಿ