ರಿಲಯೆನ್ಸ್ ದುಬಾರಿ ದರಕ್ಕೆ ಗ್ರಾಹಕರೇ ಇಲ್ಲ: ಆರ್‌ಎನ್‌ಆರ್‌ಎಲ್
ನವದೆಹಲಿ, ಸೋಮವಾರ, 31 ಆಗಸ್ಟ್ 2009( 14:59 IST )
ರಿಲಯೆನ್ಸ್ ಕಮ್ಯುನಿಕೇಷನ್ಸ್‌ನ ದುಬಾರಿ ಬೆಲೆಗೆ ಅನಿಲವನ್ನು ಖರೀದಿಸಲು ಯಾರೂ ಮುಂದೆ ಬರುವುದಿಲ್ಲ ಎಂಬುದಕ್ಕೆ ಅದು ಸರಕಾರಕ್ಕೆ ಬರೆದಿರುವ ಪತ್ರವೇ ನಿರ್ಣಾಯಕ ಸಾಕ್ಷಿ ಎಂದು ಅನಿಲ್ ಅಂಬಾನಿ ಮಾಲಕತ್ವದ ಆರ್‌ಎನ್‌ಆರ್‌ಎಲ್ ಸಮೂಹ ತಿಳಿಸಿದೆ.
ಆರ್‌ಐಎಲ್ ಬರೆದಿರುವ ಪತ್ರಕ್ಕೆ ಪ್ರತಿಕ್ರಿಯಿಸುತ್ತಿದ್ದ ಆರ್‌ಎನ್‌ಆರ್‌ಎಲ್ ವಕ್ತಾರರು, 'ದುಬಾರಿ ದರ ಕೊಟ್ಟು ಅನಿಲ ಖರೀದಿಸಲು ಗ್ರಾಹಕರು ಬದ್ಧರಾಗಿಲ್ಲ ಎಂಬುದು ರಿಲಯೆನ್ಸ್ ಕಮ್ಯುನಿಕೇಷನ್ಸ್ ಸಂಸ್ಥೆಯು ಬರೆದ ಪತ್ರದಿಂದ ರುಜುವಾತಾಗಿದೆ' ಎಂದರು.
ಕೆಜಿ-ಡಿ6 ಸ್ಥಾವರದಿಂದ ಪ್ರತಿ ದಿನ 40 ಮಿಲಿಯನ್ ಸ್ಟ್ಯಾಂಡರ್ಡ್ ಕ್ಯೂಬಿಕ್ ಮೀಟರ್ ಗ್ಯಾಸನ್ನು ಸರಕಾರವು ಗುರುತಿಸಿದ ಗ್ರಾಹಕರು ಸ್ವೀಕರಿಸಲಿದ್ದಾರೆ. ಎನ್‌ಟಿಪಿಸಿ, ದಾಭೋಲ್, ಎಸ್ಸಾರ್ ಮತ್ತು ಜಿಎಐಎಲ್‌ಗಳು ಇನ್ನಷ್ಟೇ ಘಟಕಗಳನ್ನು ಹೊಂದಬೇಕಾಗಿದೆ ಎಂದು ರಿಲಯೆನ್ಸ್ ಕಮ್ಯುನಿಕೇಷನ್ಸ್ ಸಂಸ್ಥೆಯು ಪೆಟ್ರೋಲಿಯಂ ಖಾತೆ ಕಾರ್ಯದರ್ಶಿ ಆರ್.ಎಸ್. ಪಾಂಡೆ ಬರೆದ ಪತ್ರದಲ್ಲಿ ತಿಳಿಸಿದ್ದರು.
ಆರ್‌ಐಎಲ್ ಕಾರ್ಯನಿರ್ವಾಹಕ ನಿರ್ದೇಶಕ ಹಾಗೂ ತೈಲ ಮತ್ತು ಗ್ಯಾಸ್ ವ್ಯವಹಾರಗಳ ಮುಖ್ಯಸ್ಥ ಪಿ.ಎಂ.ಎಸ್. ಪ್ರಸಾದ್ ಈ ಪತ್ರವನ್ನು ಸರಕಾರಕ್ಕೆ ಬರೆದಿದ್ದರು.
ಅನಿಲ್ ಅಂಬಾನಿ ಮತ್ತು ಮುಖೇಶ್ ಅಂಬಾನಿಯವರ ನಡುವಿನ ನೈಸರ್ಗಿಕ ಅನಿಲ ಹಂಚಿಕೆ ವಿವಾದವು ಪ್ರಸಕ್ತ ಸರ್ವೋಚ್ಛ ನ್ಯಾಯಾಲಯದಲ್ಲಿದ್ದು, ಸರಕಾರವು ಮುಖೇಶ್ ನೇತೃತ್ವದ ಸಂಸ್ಥೆಯನ್ನು ಬೆಂಬಲಿಸುತ್ತಿದೆ ಎನ್ನುವುದು ಅನಿಲ್ ಸಮೂಹದ ಆರೋಪ.