ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಅರ್ಥವ್ಯವಸ್ಥೆಯ ಕೆಟ್ಟ ಕಾಲ ಮುಗಿದಿದೆ: ಮಾಂಟೆಕ್ ಸಿಂಗ್ (India | economy | Montek Singh Ahluwalia | Growth)
 
ಭಾರತದ ಅರ್ಥವ್ಯವಸ್ಥೆಯು ಮುಂಬರುವ ಅವಧಿಗಳಲ್ಲಿ ಇನ್ನಷ್ಟು ಸುಧಾರಣೆ ಕಾಣುವ ನಿರೀಕ್ಷೆಗಳಿವೆ ಎಂದಿರುವ ಯೋಜನಾ ಆಯೋಗದ ಉಪಾಧ್ಯಕ್ಷ ಮಾಂಟೆಕ್ ಸಿಂಗ್ ಅಹ್ಲುವಾಲಿಯಾ, ಕೆಟ್ಟ ಕಾಲ ಮುಗಿದು ಹೋಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ.

ಸೋಮವಾರ ಸರಕಾರವು ಪ್ರಸಕ್ತ ಹಣಕಾಸು ವರ್ಷದ ಏಪ್ರಿಲ್-ಜೂನ್ ಅವಧಿಯಲ್ಲಿನ ಮೊದಲ ತ್ರೈಮಾಸಿಕ ಅವಧಿಯಲ್ಲಿ ದೇಶವು ಶೇ.6.1ರ ಪ್ರಗತಿ ದರ ದಾಖಲಿಸಿದ ವರದಿಯನ್ನು ಬಿಡುಗಡೆ ಮಾಡಿತ್ತು.

ಭಾರತದ ಆರ್ಥಿಕ ಪರಿಸ್ಥಿತಿಯು ನಿಧಾನವಾಗಿ ಚೇತರಿಕೆ ಕಾಣುತ್ತಿದೆ. ಮುಂಬರುವ ತಿಂಗಳುಗಳಲ್ಲಿ ಇನ್ನಷ್ಟು ಸುಧಾರಣೆ ಕಾಣಲಿದೆ. 2010ರ ಮಾರ್ಚ್ 31ಕ್ಕೆ ಕೊನೆಗೊಳ್ಳುವ ಈ ಹಣಕಾಸು ವರ್ಷದಲ್ಲಿ ಒಟ್ಟು ದೇಶೀಯ ಉತ್ಪಾದನೆ ದರವು ಶೇ.6.5ನ್ನೂ ಮೀರುವ ಸಾಧ್ಯತೆಗಳಿವೆ ಎಂದು ಮಾಂಟೆಕ್ ತಿಳಿಸಿದ್ದಾರೆ.

ಸರಕಾರವು ಈ ವರ್ಷ ತನ್ನ ಸಾಲ ನೀತಿಗಳನ್ನು ಬದಲಾಯಿಸುವ ಅಗತ್ಯವಿಲ್ಲ ಎಂದಿರುವ ಹಣಕಾಸು ಕಾರ್ಯದರ್ಶಿ ಮಾಂಟೆಕ್, ಲಿಕ್ವಿಡಿಟಿಯಲ್ಲಿ ಯಾವುದಾದರೂ ಸಮಸ್ಯೆಗಳಿದ್ದರೆ ಬದಲಾವಣೆಗಳ ಸಾಧ್ಯತೆಗಳಿರುತ್ತದೆ ಎಂದರು.

ಆದರೂ 11ನೇ ಪಂಚವಾರ್ಷಿಕ ಯೋಜನೆ (2007-12)ಯಲ್ಲಿ ಸಾಧಿಸಲುದ್ದೇಶಿಸಿರುವ ಶೇ.9ರ ಅಭಿವೃದ್ಧಿ ದರಕ್ಕೆ ಜಾಗತಿಕ ಆರ್ಥಿಕ ಹಿಂಜರಿತ ಮತ್ತು ಬರಗಾಲವು ನಿಯಂತ್ರಣ ಹೇರಬಹುದು ಎಂಬ ಭೀತಿಯನ್ನೂ ಮಾಂಟೆಕ್ ಇದೇ ಸಂದರ್ಭದಲ್ಲಿ ವ್ಯಕ್ತಪಡಿಸಿದ್ದಾರೆ.

2007-08ರ ಸಾಲಿನಲ್ಲಿ ಶೇ.9ರ ಪ್ರಗತಿ ದರ ಹೊಂದಿದ್ದ ಭಾರತವು ಕಳೆದ ವರ್ಷ ಶೇ.6.7ಕ್ಕೆ ಕುಸಿತ ಕಂಡಿತ್ತು. ಪ್ರಸಕ್ತ ಹಣಕಾಸು ವರ್ಷದಲ್ಲಿ ಶೇ.6.5ರ ಪ್ರಗತಿಯನ್ನು ದಾಖಲಿಸುವ ಉದ್ದೇಶವನ್ನು ಹೊಂದಲಾಗಿದೆ.
• Play Free Online Games Click Here
• Blogs, Videos and More Click Here
• Send Musical and Animated Cards Click Here
• Simple,Fast & Free Email Service Click Here
ಸಂಬಂಧಿತ ಮಾಹಿತಿ ಹುಡುಕಿ