ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಚೀನಾ ದೂರವಾಣಿ ಪರಿಕರಗಳ ಮೇಲೆ ಭಾರತ ನಿಷೇಧ? (DoT | Chinese Phone | Reliance | China)
 
ದೂರವಾಣಿ ಸೇವೆ ಪೂರೈಕೆದಾರರ ಜತೆ ಮಾತುಕತೆ ನಡೆಸಿದ ದೂರವಾಣಿ ಇಲಾಖೆಯು (ಡಾಟ್) ಭದ್ರತಾ ಲೋಪಗಳು ಕಂಡು ಬಂದಿರುವ ಹಿನ್ನಲೆಯಲ್ಲಿ ಚೀನಾ ದೂರವಾಣಿ ಪರಿಕರಗಳು ಭಾರತಕ್ಕೆ ಪ್ರವೇಶಿಸುವುದರ ಮೇಲೆ ನಿಷೇಧ ಹೇರುವ ಬೆದರಿಕೆಯನ್ನು ಹಾಕಿದೆ.

ಇದರಿಂದಾಗಿ ಕೆಲವೇ ಕಂಪನಿಗಳ ಏಕಸ್ವಾಮ್ಯವು ಹೆಚ್ಚಲಿದ್ದು, ಪರಿಣಾಮ ಸೇವಾದಾರರ ವೆಚ್ಚಗಳ ಮೇಲಾಗುತ್ತದೆ ಎಂದು ದೂರವಾಣಿ ಕ್ಷೇತ್ರ ಪ್ರತಿಕ್ರಿಯಿಸಿದೆ.

ಸರಕಾರ ಈ ನಿರ್ಧಾರಕ್ಕೆ ಬಂದಲ್ಲಿ ಚೀನಾದಿಂದ ಆಮದು ಮಾಡಿಕೊಳ್ಳುವ 500 ಬಿಲಿಯನ್ ಡಾಲರ್ ಮೊತ್ತದ ಪರಿಕರಗಳು ಕೈ ತಪ್ಪಬಹುದು. ಹಾಗಾಗಿ ತನ್ನ ನೆಟ್‌ವರ್ಕ್‌ಗಳಲ್ಲಿ ಚೀನಾದ ಪರಿಕರಗಳನ್ನು ಬಳಸುತ್ತಿರುವ ರಿಲಯೆನ್ಸ್ ಕಮ್ಯುನಿಕೇಷನ್ಸ್ ಮುಂತಾದ ಸಂಸ್ಥೆಗಳು ಸಮಸ್ಯೆಗಳನ್ನೆದುರಿಸಬಹುದು ಎಂಬ ಭೀತಿಯನ್ನೂ ವ್ಯಕ್ತಪಡಿಸಲಾಗಿದೆ.

ಉದ್ಯಮ ವ್ಯಕ್ತಪಡಿಸಿರುವ ಕಳವಳಗಳನ್ನು ಗಮನದಲ್ಲಿಟ್ಟುಕೊಂಡಿರುವ ದೂರವಾಣಿ ಸಚಿವಾಲಯವು ಗೃಹ ವ್ಯವಹಾರಗಳ ಸಚಿವಾಲಯದೊಂದಿಗೆ ಸಂಪರ್ಕದಲ್ಲಿದ್ದು, ಪರಿಕರಗಳ ಖರೀದಿಗೆ ನೂತನ ನಿಯಮಾವಳಿಗಳನ್ನು ರೂಪಿಸುವ ಸಾಧ್ಯತೆಗಳಿವೆ.

ಸರಕಾರವು ಚೀನಿ ದೂರವಾಣಿ ಪರಿಕರಗಳ ಮೇಲೆ ನಿಷೇಧ ಹೇರಿದಲ್ಲಿ ತಾವು ಖ್ಯಾತ ಕಂಪನಿಗಳ ಮೊರೆ ಹೋಗಬೇಕಾಗುತ್ತದೆ. ಅವರ ಏಕಸ್ವಾಮ್ಯತೆಯಿಂದಾಗಿ ನಾವು ದುಬಾರಿ ಬೆಲೆಯನ್ನು ತೆತ್ತು ಪರಿಕರಗಳನ್ನು ಖರೀದಿಸಬೇಕಾಗುತ್ತದೆ ಎಂದು ಖಾಸಗಿ ದೂರವಾಣಿ ಸಂಸ್ಥೆಗಳು ಆತಂಕ ವ್ಯಕ್ತಪಡಿಸಿವೆ.

ಈ ಬೆಳವಣಿಗೆಗಳ ಬಗ್ಗೆ ಚೀನಾದ ಕಂಪನಿಯೊಂದನ್ನು (ಹುವೈ-Huawei) ಸಂಪರ್ಕಿಸಿದಾಗ, ತನಗೆ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲವೆಂದು ತಿಳಿಸಿದೆ. ಆದರೆ ತಾನು ಭಾರತದ ದೂರವಾಣಿ ಸಚಿವಾಲಯಕ್ಕೆ ಅಗತ್ಯ ಭದ್ರತಾ ಸಹಕಾರದ ಭರವಸೆ ನೀಡಲು ಸಿದ್ಧವಿದ್ದು, ಈ ಸಂಬಂಧ ದೂರವಾಣಿ ಸೇವಾದಾರರ ಜತೆ ಮಾತುಕತೆ ನಡೆಸುವುದಾಗಿ ತಿಳಿಸಿದೆ.
• Play Free Online Games Click Here
• Blogs, Videos and More Click Here
• Send Musical and Animated Cards Click Here
• Simple,Fast & Free Email Service Click Here
ಸಂಬಂಧಿತ ಮಾಹಿತಿ ಹುಡುಕಿ