ನೇಪಾಳದ ಮಾಜಿ ದೊರೆ ಜ್ಞಾನೇಂದ್ರ ಅವರ ಪುತ್ರ ಪರಸ್ ಭಾರತದಲ್ಲಿನ ಕಳ್ಳನೋಟಿನ ದಂಧೆಯ ಸೂತ್ರಧಾರನೇ ಎಂಬ ಸಂಶಯ ಈಗ ಹುಟ್ಟಿಕೊಂಡಿದೆ. ನಕಲಿ ನೋಟು ಚಲಾವಣೆ ಮಾಡುತ್ತಿದ್ದ ಸಂದರ್ಭ ಮಧ್ಯಪ್ರದೇಶ ಪೊಲೀಸರ ಕೈಗೆ ಸಿಕ್ಕಿ ಬಿದ್ದಿರುವ ಖದೀಮರು ಪರಸ್ ಹೆಸರನ್ನು ಬಾಯ್ಬಿಟ್ಟಿದ್ದಾರೆ. ಪರಸ್‌ಗೆ ಕುಖ್ಯಾತ ಭಯೋತ್ಪಾದಕ ದಾವೂದ್ ಇಬ್ರಾಹಿಂ ನಂಟಿದೆ. ಪಾಕಿಸ್ತಾನದಲ್ಲಿ ಭಾರತದ ನಕಲಿ ನೋಡು ಮುದ್ರಿಸಿ ನೇಪಾಳಕ್ಕೆ ಕಳುಹಿಸಿ ಪರಸ್ ಮೂಲಕವಷ್ಟೇ ಅದು ಭಾರತಕ್ಕೆ ಹರಿದು ಬರುತ್ತಿದೆ. ಭಾರತದಲ್ಲೂ, ಪರಸ್‌ಗೆ ಪ್ರಮುಖ ಮಂತ್ರಿಯೊಬ್ಬರ ಮಗ ಇದಕ್ಕೆ ಸಹಾಯ ಮಾಡುತ್ತಿದ್ದಾನೆ ಎನ್ನಲಾಗಿದೆ.