ಜಾಗತಿಕ ಆರ್ಥಿಕ ಸುಧಾರಣೆ ಬಗ್ಗೆ ಕಳವಳಗೊಂಡು ಮಧ್ಯರಾತ್ರಿ ಭಾರೀ ಹಿನ್ನಡೆ ಅನುಭವಿಸಿದ್ದ ತೈಲ ಬೆಲೆಯು ಏಷಿಯನ್ ಮಾರುಕಟ್ಟೆಯಲ್ಲಿ ಚೇತರಿಕೆ ಕಂಡಿದೆ.
ನ್ಯೂಯಾರ್ಕ್ ಪ್ರಮುಖ ಒಪ್ಪಂದ ಸಾದಾ ಕಚ್ಚಾ ತೈಲದ ಅಕ್ಟೋಬರ್ ವಿತರಣೆಯಲ್ಲಿ 24 ಸೆಂಟ್ಸ್‌ಗಳ ಏರಿಕೆ ಕಂಡಿದ್ದು, ಪ್ರತೀ ಬ್ಯಾರೆಲ್‌ಗೆ 70.20ರಲ್ಲಿ ವ್ಯವಹಾರ ನಡೆಸಿದೆ.
ಅರ್ಥವ್ಯವಸ್ಥೆಯ ಹಿಂಜರಿತದ ಕಾರಣದಿಂದ ಜಾಗತಿಕ ಆರ್ಥಿಕ ಪ್ರಗತಿಯ ಬಗ್ಗೆ ಕಳವಳವುಂಟಾಗಿದ್ದರಿಂದಾಗಿ ಚೀನಾ ಶೇರು ಮಾರುಕಟ್ಟೆ ತತ್ತರಿಸಿದ ಕಾರಣ ಸೋಮವಾರ ಉಭಯ ಒಪ್ಪಂದಗಳು ಕೂಡ 70 ಅಮೆರಿಕನ್ ಡಾಲರ್‌ಗಳೊಳಗೆ ವ್ಯವಹಾರ ಮುಕ್ತಾಯಗೊಳಿಸಿದ್ದವು ಎಂದು ವಿಶ್ಲೇಷಕರು ತಿಳಿಸಿದ್ದಾರೆ.
ಚೀನಾ ಶೇರು ಮಾರುಕಟ್ಟೆಯಲ್ಲಿನ ತಲ್ಲಣಗಳು ಕಚ್ಚಾ ತೈಲ ಮಾರುಕಟ್ಟೆಯ ಮೇಲೆ ಪ್ರಬಲ ಹೊಡೆತ ನೀಡಿತು. ಚೀನಾದ ಆರ್ಥಿಕತೆ ಉತ್ತಮವಾಗಿದ್ದರೆ ಅದು ಹೆಚ್ಚಿನ ತೈಲ ಆಮದು ಮಾಡಿಕೊಳ್ಳುವ ನಿರ್ಧಾರಕ್ಕೆ ಬರುತ್ತದೆ ಎಂದು ಆಸ್ಟ್ರೇಲಿಯಾ ಕಾಮನ್‌ವೆಲ್ತ್ ಬ್ಯಾಂಕಿನ ಆರ್ಥಿಕ ತಜ್ಞ ಡೇವಿಡ್ ಮೋರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಚೀನಾದ ಶಾಂಘೈ ಕಾಂಪೋಸಿಟ್ ಸೂಚ್ಯಂಕವು ಶೇ.6.74ಕ್ಕೆ ಸೋಮವಾರ ಕುಸಿತ ಕಂಡಿತ್ತು. 2008ರ ನಂತರ ಒಂದೇ ದಿನ ಇಷ್ಟು ಪ್ರಮಾಣದಲ್ಲಿ ಮಾರುಕಟ್ಟೆ ಕುಸಿತಕ್ಕೊಳಗಾದದ್ದು ಇದೇ ಮೊದಲು.