ಜಾಗತಿಕ ಆರ್ಥಿಕ ಕುಸಿತ ರಾಜ್ಯದ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಮೇಲೆ ಗಾಢ ಪರಿಣಾಮ ಬೀರಿಲ್ಲ. ಇದು ರಾಜ್ಯ ಸರ್ಕಾರ ನೀಡುವ ಸ್ಪಷ್ಟ ಮಾಹಿತಿ. ಎಲ್ಲೆಡೆ ಆರ್ಥಿಕ ಕುಸಿತವಿದ್ದರೂ ರಾಜ್ಯದಿಂದ ಸಾಫ್ಟ್‌ವೇರ್ ರಫ್ತು ಹೆಚ್ಚಾಗಿದೆ. ಸಾಕಷ್ಟು ಹೊಸ ಕಂಪೆನಿಗಳು ಆರಂಭವಾಗಿದೆ ಎಂದು ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ತಿಳಿಸಿದ್ದಾರೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಾದ ಬೆಳವಣಿಗೆ, ಮುಂದಿನ ಗುರಿ, ಮತ್ತಿತರ ವಿಷಯಗಳ ವಿವರ ನೀಡಿದರು.
ಐಟಿ ಕ್ಷೇತ್ರದಲ್ಲಿ ಕರ್ನಾಟಕ 2008-09ರಲ್ಲೂ ದೇಶದ ಮುಂಚೂಣಿ ರಾಜ್ಯವಾಗಿ ಹೊರಹೊಮ್ಮಿದೆ. ಇತರೆ ರಾಜ್ಯಗಳ ಸಾಧನೆ ಗಮನಿಸಿದರೆ ಕರ್ನಾಟಕ ಮುನ್ನಡೆಯಲ್ಲಿದೆ. 2008-09ರಲ್ಲಿ ರಾಷ್ಟ್ರೀಯ ಸಾಫ್ಟ್‌ವೇರ್ ರಫ್ತು 2,04,662 ಕೋಟಿ ರೂಗಳಾಗಿದ್ದರೆ. ರಾಜ್ಯದ ಪಾಲು 74,929 ಕೋಟಿ ರೂಪಾಯಿ ಒಟ್ಟಾರೆ ಸಾಫ್ಟ್‌ವೇರ್ ರಫ್ತಿನಲ್ಲಿ ಶೇ.34ರಷ್ಟು ರಾಜ್ಯದ ಪಾಲು.
ರಾಜ್ಯದಿಂದ ಸಾಫ್ಟ್‌ವೇರ್ ರಫ್ತು ದೊಡ್ಡ ಪ್ರಮಾಣದಲ್ಲೇ ಆಗಿದೆ. ಸಾಫ್ಟ್‌ವೇರ್ ರಫ್ತು ಕಳೆದ ಸಾಲಿಗಿಂತ ಅಂದಾಜು 15,000 ಕೋಟಿ ರೂಪಾಯಿ ಅಂದರೆ ಶೇ.24ರಷ್ಟು ಹೆಚ್ಚಳವಾಗಿದೆ ಎಂದು ವಿವರ ನೀಡಿದರು.