ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಸಚಿವಾಲಯಗಳಿಂದ ಅನುದಾನ ಬಳಕೆಯಲ್ಲಿ ವಿಫಲತೆ:ಸಿಎಜಿ (Government | CAG | funds allocation)
Bookmark and Share Feedback Print
 
ಸಾಮಾಜಿಕ ಕ್ಷೇತ್ರದ ಯೋಜನೆಗಳ ಅಭಿವೃದ್ಧಿಗೆ, ಕೇಂದ್ರ ಸರಕಾರ ವಿವಿದ ಸಚಿವಾಲಯಗಳಿಗೆ ನಿಗದಿಪಡಿಸಿದ ಮೊತ್ತದಲ್ಲಿ, 2005-06 ಮತ್ತು 2007-08ರ ಅವಧಿಯಲ್ಲಿ 1 ಲಕ್ಷ ಕೋಟಿ ರೂಪಾಯಿ ವೆಚ್ಚ ಮಾಡದಿರುವ ಕರ್ತವ್ಯಲೋಪವನ್ನು ಕೇಂದ್ರದ ಲೆಕ್ಕಪರಿಶೋಧಕ ಸಂಸ್ಥೆ ಬಹಿರಂಗಪಡಿಸಿದೆ.

2007-08ರಲ್ಲಿ ಕೇಂದ್ರದ ವಿವಿಧ ಸಚಿವಾಲಯಗಳು ಸರಕಾರ ನಿಗದಿಪಡಿಸಿದ ಮೊತ್ತವನ್ನು ವೆಚ್ಚ ಮಾಡಿರುವುದಾಗಿ ವರದಿಯಲ್ಲಿ ಸಲ್ಲಿಸಿವೆ.ಉದಾಹರಣೆಗೆ ವಿವಿಧ ಯೋಜನೆಗಳಿಗಾಗಿ 51,000 ಕೋಟಿ ರೂಪಾಯಿಗಳ ನಿಗದಿಪಡಿಸಿದ ಮೊತ್ತ ನೇರವಾಗಿ ಎನ್‌ಜಿಒಗಳಿಗೆ ಹಾಗೂ ಜಿಲ್ಲಾ ಅಡಳಿತದ ಬ್ಯಾಂಕ್‌ ಖಾತೆಗಳಿಗೆ ಜಮಾವಣೆಯಾಗುತ್ತದೆ.ಆದರೆ ಸಚಿವಾಲಯಗಳು ವೆಚ್ಚ ಮಾಡಿರುವುದಾಗಿ ವರದಿಯನ್ನು ಸಲ್ಲಿಸಿವೆ ಎಂದು ಸಿಎಜಿ ವರದಿ ಮಾಡಿದೆ.

ಆದರೆ, ಎನ್‌ಜಿಒ ಹಾಗೂ ಜಿಲ್ಲಾ ಅಡಳಿತದ ಬ್ಯಾಂಕ್‌ ಖಾತೆಗಳಲ್ಲಿ ಜಮಾವಣೆಯಾದ ಸರಕಾರದ ಹಣ ನಿಜವಾಗಿ ವೆಚ್ಚವಾಗಿದೆ ಎನ್ನುವುದನ್ನು ಪರಿಶೀಲಿಸಲು ವಿವಿಧ ಸಚಿವಾಲಯಗಳು ವಿಫಲವಾಗಿವೆ.ಆದ್ದರಿಂದ ಕೇಂದ್ರ ಸರಕಾರ ಸಚಿವಾಲಯಗಳಿಗೆ ಎಚ್ಚರಿಕೆಯನ್ನು ನೀಡಲಿದೆ ಎಂದು ಸಿಎಜಿ ಮೂಲಗಳು ತಿಳಿಸಿವೆ.

2007-08ರ ಅವಧಿಯಲ್ಲಿ ನಾಗರಿಕ ಸಚಿವಾಲಯಗಳಿಗೆ ನೀಡಿದ 97 ಅನುದಾನಗಳಲ್ಲಿ 1,08,000ಕೋಟಿ ರೂಪಾಯಿಗಳನ್ನು ವೆಚ್ಚ ಮಾಡದೆ ಸರಕಾರಕ್ಕೆ ವರ್ಷದ ಕೊನೆಯ ದಿನದಂದು ಸಚಿವಾಲಯಗಳು ಮರಳಿಸಿವೆ ಎಂದು ಕೇಂದ್ರ ಲೆಕ್ಕಪರಿಶೋಧಕ ಸಂಸ್ಥೆ ವರದಿಯಲ್ಲಿ ಪ್ರಕಟಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ