ಕಡಿಮೆ ದರದ ಮಾರುತಿ800 ಮಾಡೆಲ್ ಕಾರುಗಳನ್ನು ಉನ್ನತ ದರ್ಜೆಗೇರಿಸುವ ಯೋಜನೆಗಳಿಲ್ಲವಾದ್ದರಿಂದ, ಉತ್ಪಾದನೆಯನ್ನು ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ ಎಂದು ಮಾರುತಿ ಸುಝುಕಿ ಕಂಪೆನಿಯ ಭಾರತದ ಮುಖ್ಯಸ್ಥ ಆರ್.ಸಿ. ಭಾರ್ಗವಾ ಹೇಳಿದ್ದಾರೆ.
1982ರಲ್ಲಿ ಮಾರುಕಟ್ಟೆಯನ್ನು ಪ್ರವೇಶಿಸಿದ ಮಾರುತಿ800 ಮಾಡೆಲ್ ಕಾರು ಮಾರಾಟವನ್ನು, ಏಪ್ರಿಲ್ ತಿಂಗಳಿನಿಂದ 13 ನಗರಗಳಲ್ಲಿ ರದ್ದುಗೊಳಿಸಲಾಗುತ್ತಿದೆ ಎಂದು ಭಾರ್ಗವ್ ತಿಳಿಸಿದ್ದಾರೆ.
ಮಾರುತಿ800, ಅಲ್ಟೊ, ವಾಗನ್‌ಆರ್ ಎಸ್ಟಿಲೊ ಎ.ಸ್ಟಾರ್,ರಿಟ್ಝ್ ಮತ್ತು ಸ್ವಿಫ್ಟ್ ಮಾಡೆಲ್ ಕಾರುಗಳನ್ನು ತಯಾರಿಸಿದ ಮಾರುತಿ ಸುಝುಕಿ ಸಂಸ್ಥೆ, ಪರಿಸರ ನಿಯಮಗಳಿಗೆ ಹೊಂದಿಕೆಯಾಗದ ಕಾರುಗಳ ಮಾಡೆಲ್ ಸಂಖ್ಯೆಯನ್ನು ಕಡಿತಗೊಳಿಸಲು ಕಂಪೆನಿ ನಿರ್ಧರಿಸಿದೆ.
ದೆಹಲಿ, ಮುಂಬೈ, ಕೋಲ್ಕತಾ, ಚೆನ್ನೈ, ಬೆಂಗಳೂರು ಹೈದ್ರಾಬಾದ್, ಪುಣೆ, ಕಾನ್ಪುರ್, ಅಹ್ಮದಾಬಾದ್,ಸೂರತ್ ಮತ್ತು ಆಗ್ರಾ ನಗರಗಳು ಬಿಎಸ್(4)ಸಂಚಾರಿ ನಿಯಮಗಳ ಅಡಿಯಲ್ಲಿ ಬರುತ್ತಿದ್ದು,ಇತರ ನಗರಗಳು ಬಿಎಸ್(3)ನಿಯಮಗಳ ವ್ಯಾಪ್ತಿಗೆ ಒಳಪಡುತ್ತವೆ.ಆದರೆ ಮುಂಬರುವ 2015-16ರಲ್ಲಿ ಈ ನಗರಗಳು ಕೂಡಾ ಬಿಎಸ್(4)ಸಂಚಾರಿ ಪರಿಸರ ನಿಯಮಗಳ ಅಡಿಯಲ್ಲಿ ಬರುತ್ತವೆ.
ಟೋಯೋಟಾ, ವೊಕ್ಸ್‌ವಾಗನ್ ದಿಂದ ಫೋರ್ಡ್‌ವರೆಗಿನ ಕಂಪೆನಿಗಳು, ಸಣ್ಣಗಾತ್ರದ ಕಾರುಗಳನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆಗೊಳಿಸಲು ಸಿದ್ಧತೆ ನಡೆಸಿವೆ. ಏತನ್ಮಧ್ಯೆ,ಟಾಟಾ ಮೋಟಾರ್ಸ್ ಕೂಡಾ ಮಾರುತಿ800 ಮಾಡೆಲ್ ಕಾರಿನ ದರಕ್ಕಿಂತ ಕಡಿಮೆ ದರದ ನ್ಯಾನೋ ಕಾರನ್ನುಮಾರುಕಟ್ಟೆಗೆ ಈಗಾಗಲೇ ಬಿಡುಗಡೆಗೊಳಿಸಿದೆ.