ಕಳೆದ ವರ್ಷದ ಡಿಸೆಂಬರ್ ತಿಂಗಳ ಅವಧಿಯಲ್ಲಿ ಕೇವಲ ಶೇ.0.6ರಷ್ಟು ಚೇತರಿಕೆ ಕಂಡಿದ್ದ ಕೈಗಾರಿಕೆ ಉತ್ಪಾದನೆ ಕ್ಷೇತ್ರ,ಡಿಸೆಂಬರ್ 2009ಕ್ಕೆ ತ್ರೈಮಾಸಿಕ ಅಂತ್ಯಗೊಂಡಂತೆ ಶೇ.16.8ರಷ್ಟು ಏರಿಕೆ ಕಂಡು ಕೈಗಾರಿಕೆ ವಲಯದಲ್ಲಿ ಅಚ್ಚರಿ ಮೂಡಿಸಿದೆ.
ಕೈಗಾರಿಕೆ ಉತ್ಪಾದನೆ ಸೂಚ್ಯಂಕದಲ್ಲಿ ಶೇ.80ರಷ್ಟು ಪಾಲನ್ನು ಹೊಂದಿರುವ ಉತ್ಪಾದನಾ ಕ್ಷೇತ್ರ, ಕಳೆದ ವರ್ಷ ಕೇವಲ ಶೇ.0.6ರಷ್ಟು ಏರಿಕೆ ಕಂಡಿತ್ತು. ಆದರೆ ಡಿಸೆಂಬರ್ ತಿಂಗಳ ಅವಧಿಯಲ್ಲಿ ಶೇ.18.5ರಷ್ಟು ಏರಿಕೆ ಕಂಡಿದೆ.
ಉತ್ಪಾದನಾ ಕ್ಷೇತ್ರದ ವಿಭಾಗದಲ್ಲಿ,ಕಳೆದ ವರ್ಷ ಶೇ.4.2ರಷ್ಟು ಏರಿಕೆ ಕಂಡಿದ್ದ ಗೃಹೋಪಕರಣಗಳ ಕ್ಷೇತ್ರ, ಡಿಸೆಂಬರ್ ತಿಂಗಳ ಅವಧಿಯಲ್ಲಿ ಶೇ.46ರಷ್ಟು ಚೇತರಿಕೆ ಕಂಡಿದೆ.
2007-08ರಲ್ಲಿ ಶೇ.3.6ರಷ್ಟಿದ್ದ ಕೈಗಾರಿಕೆ ಅಭಿವೃದ್ಧಿ ದರ,2009-10ರ ಆರಂಭಿಕ ಒಂಬತ್ತು ತಿಂಗಳ ಅವಧಿಯಲ್ಲಿ ಶೇ.8.6ಕ್ಕೆ ಚೇತರಿಕೆ ಕಂಡಿತ್ತು.
ಜಾಗತಿಕ ಆರ್ಥಿಕ ಕುಸಿತದಿಂದ ಕಂಗಾಲಾಗಿದ್ದ ಕೈಗಾರಿಕೆ ಕ್ಷೇತ್ರದ ಪುನಶ್ಚೇತನಕ್ಕೆ, ಕೇಂದ್ರ ಸರಕಾರ ಘೋಷಿಸಿದ ಮೂರು ಉತ್ತೇಜನ ಪ್ಯಾಕೇಜ್‌ಗಳಿಂದಾಗಿ ಕೈಗಾರಿಕೆ ಕ್ಷೇತ್ರದ ಚೇತರಿಕೆಗೆ ಕಾರಣವಾಯಿತು.