ನ್ಯೂಯಾರ್ಕ್, ಶುಕ್ರವಾರ, 12 ಫೆಬ್ರವರಿ 2010( 16:12 IST )
ಮೊಟೊರೊಲಾ ಕಂಪೆನಿ,2011ರ ಮೊದಲ ತ್ರೈಮಾಸಿಕ ಅವಧಿಯಲ್ಲಿ,ಕಂಪೆನಿಯನ್ನು ವಿಭಜಿಸಲಿದ್ದು, ಸೆಲ್‌ಫೋನ್ ಮತ್ತು ಟೆಲಿವಿಜನ್ ಸೆಟಪ್ ಬಾಕ್ಸ್ ಮತ್ತೊಂದನ್ನು ಎಂಟರ್‌ಪ್ರೈಸೆಸ್ ನೆಟ್‌ವರ್ಕಿಂಗ್ ವಹಿವಾಟನ್ನು ನೋಡಿಕೊಳ್ಳಲಿವೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.
ಸಾರ್ವಜನಿಕ ಕ್ಷೇತ್ರದ ವಹಿವಾಟು ಹೊಂದಿರುವ ಕಂಪೆನಿಯನ್ನು ಎರಡು ಸ್ವತಂತ್ರ ಭಾಗಗಳಾಗಿ ವಿಂಗಡಿಸುವುದರಿಂದ, ಮಾರುಕಟ್ಟೆಯಲ್ಲಿ ಸ್ಥಿತಿಯನ್ನು ಉತ್ತಮಗೊಳಿಸಲು ಸಹಕಾರಿಯಾಗುತ್ತದೆ ಎಂದು ಕಂಪೆನಿಯ ವಕ್ತಾರರು ತಿಳಿಸಿದ್ದಾರೆ.
ಮೊಟೊರೊಲಾ ಕಂಪೆನಿಯ ವಿಭಜನೆಯ ಮಾಹಿತಿ ಹೊರಬಂದ ನಂತರ, ಶೇರುಪೇಟೆಯಲ್ಲಿ ಶೇರುದರಗಳಲ್ಲಿ ಶೇ.2.3ರಷ್ಟು ಏರಿಕೆ ಕಂಡಿವೆ.
ಮೊಬೈಲ್ ಕ್ಷೇತ್ರದಲ್ಲಿ ನೂತನ ಮೊಬೈಲ್ ಕಂಪೆನಿಗಳ ಸ್ಪರ್ಧೆಯಲ್ಲಿ ಹಿನ್ನೆಡೆ ಅನುಭವಿಸುತ್ತಿದ್ದು, ರಾಝ್, ಡ್ರೊಯಿಡ್ ಮಾಡೆಲ್‌ಗಳ ನಂತರ ಇತರ ಮಾಡೆಲ್‌ಗಳ ಮಾರಾಟದಲ್ಲಿ ಕುಸಿತವನ್ನು ಕಂಡಿದೆ.
ಕಂಪೆನಿಯ ದುರ್ಬಲ ಆರ್ಥಿಕತೆಯಿಂದಾಗಿ ಸೆಟ್-ಟಾಪ್ ಬಾಕ್ಸ್‌ಗಳ ವಹಿವಾಟಿನಲ್ಲಿ ಕೂಡಾ ಮೊಟೊರೊಲಾ ಕಂಪೆನಿ ಭಾರಿ ನಷ್ಟವನ್ನು ಅನುಭವಿಸಿದೆ.