ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಮೆರಿಕ ಮೂಲದ ಕಂಪೆನಿಗಳು ತೆರಿಗೆ ವಂಚಕರಾಗಿದ್ದಾರೆ ಎಂದು ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ಮತ್ತೊಮ್ಮೆ ಐಟಿ ಕಂಪೆನಿಗಳಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ.
ನಿಮ್ಮ ವಹಿವಾಟು ಅಮೆರಿಕದಲ್ಲಿದ್ದಲ್ಲಿ ಅಥವಾ ಅಮೆರಿಕದಲ್ಲಿ ಹೂಡಿಕೆ ಮಾಡುತ್ತಿದ್ದಲ್ಲಿ ಹಾಗೂ ಇಲ್ಲಿನ ಯುವಕರಿಗೆ ಉದ್ಯೋಗಿಗಳನ್ನು ನೀಡುತ್ತಿದ್ದಲ್ಲಿ ನೀವು ಶೇ.35ರಷ್ಟು ತೆರಿಗೆಯನ್ನು ಪಾವತಿಸಬೇಕಾಗುತ್ತದೆ ಎಂದು ಬ್ಲೂಮ್‌ಬರ್ಗ್ ಬಿಜಿನೆಸ್ ವೀಕ್ ಮ್ಯಾಗ್‌ಜಿನ್‌ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಏತನ್ಮಧ್ಯೆ, ಒಂದು ವೇಳೆ ನೀವು ಬಹುರಾಷ್ಟ್ರೀಯ ಕಂಪೆನಿಗಳಾಗಿದ್ದಲ್ಲಿ ಭಾರತದಲ್ಲಿ ಹೂಡಿಕೆ ಮಾಡುತ್ತಿದ್ದಲ್ಲಿ,ನಿಮ್ಮ ಉದ್ಯೋಗಿಗಳು, ಉಪಕರಣಗಳು ಭಾರತದಲ್ಲಿದ್ದು, ಕೇಂದ್ರ ಕಚೇರಿ ಮಾತ್ರ ಅಮೆರಿಕದಲ್ಲಿದ್ದಲ್ಲಿ, ಭಾರತದಲ್ಲಿ ವೆಚ್ಚದ ರಿಯಾಯತಿಯನ್ನು ಪಡೆಯುತ್ತೀರಿ. ಆದರೆ ನಿಮ್ಮ ಲಾಭವನ್ನು ಹೊರರಾಷ್ಟ್ರಗಳಲ್ಲಿ ಹೂಡಿಕೆ ಮಾಡುತ್ತಿರುವುದು ಸೂಕ್ತವಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದ್ದಾರೆ.