ಭಾರತೀಯ ರಿಸರ್ವ್ ಬ್ಯಾಂಕ್ ಕೇವಲ ಹಣದುಬ್ಬರ ಏರಿಕೆ ಕಳವಳವನ್ನು ಗಮನದಲ್ಲಿಟ್ಟುಕೊಂಡು ರೆಪೋ ದರಗಳನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದು ಆರ್‌ಬಿಐ ಗವರ್ನರ್ ಹೇಳಿದ್ದಾರೆ.
ಭಾರತೀಯ ರಿಸರ್ವ್ ಬ್ಯಾಂಕ್ ಜನೆವರಿ29 ರಂದು ನಡೆಸಿದ ಪರಿಷ್ಕರಣ ಸಭೆಯಲ್ಲಿ ಕೇವಲ ಕ್ಯಾಶ್ ರಿಸರ್ವ್ ರೇಶಿಯೋ ದರಗಳನ್ನು ಮಾತ್ರ 75 ಬೇಸಿಸ್ ಪಾಯಿಂಟ್‌ಗಳನ್ನು ಹೆಚ್ಚಿಸಿ,ರೆಪೋ ದರಗಳನ್ನು ಬದಲಾಯಿಸಿರಲಿಲ್ಲವೆಂದು ಸುಬ್ಬಾರಾವ್ ತಿಳಿಸಿದ್ದಾರೆ.
ಕೈಗಾರಿಕೆ ವೃದ್ಧಿ ದರ ಡಿಸೆಂಬರ್2009ಕ್ಕೆ ತ್ರೈಮಾಸಿಕ ಅಂತ್ಯಗೊಂಡಂತೆ ಶೇ.16.8ರಷ್ಟು ಏರಿಕೆ ಕಂಡ ದಾಖಲೆಗಳನ್ನು ಅಧಿಕಾರಿಗಳು ಬಿಡುಗಡೆಗೊಳಿಸಿದ ನಂತರ ಆರ್‌ಬಿಐ ಹೇಳಿಕೆ ಹೊರಬಿದ್ದಿದೆ.
ಪ್ರಾಥಮಿಕ ಅಗತ್ಯ ದಿನಸಿ ವಸ್ತುಗಳು ಹಾಗೂ ತರಕಾರಿ ಮತ್ತು ಹಣ್ಣುಗಳ ದರಗಳಲ್ಲಿ ಏರಿಕೆಯಾಗಿದ್ದರಿಂದ ಅಹಾರ ಹಣದುಬ್ಬರ ದರ ಮತ್ತೆ ಏರಿಕೆ ಕಂಡಿರುವುದು ಜನಸಾಮಾನ್ಯರಲ್ಲಿ ಆತಂಕ ಮೂಡಿಸಿದೆ.