ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಚಿನ್ನದ ದರ:ಪ್ರತಿ10ಗ್ರಾಂಗೆ 16,640 ರೂಪಾಯಿ (Gold | price | Silver | Seasonal buying | Demand)
Bookmark and Share Feedback Print
 
ಸೀಜನ್ ಬೇಡಿಕೆಯಿಂದಾಗಿ ಚಿನ್ನದ ಖರೀದಿಯಲ್ಲಿ ಏರಿಕೆಯಾಗಿದ್ದು,ಪ್ರತಿ 10ಗ್ರಾಂ ಚಿನ್ನಕ್ಕೆ 75 ರೂಪಾಯಿಗಳ ಏರಿಕೆಯಾಗಿ 16,640 ರೂಪಾಯಿಗಳಿಗೆ ತಲುಪಿದೆ ಎಂದು ಚಿನಿವಾರಪೇಟೆಯ ಮೂಲಗಳು ತಿಳಿಸಿವೆ.

ಸ್ಟ್ಯಾಂಡರ್ಡ್ ಚಿನ್ನ ಹಾಗೂ ಆಭರಣ ಚಿನ್ನದ ದರಗಳಲ್ಲಿ ಕೂಡಾ 75 ರೂಪಾಯಿಗಳ ಏರಿಕೆಯಾಗಿ, ಕ್ರಮವಾಗಿ ಪ್ರತಿ 10ಗ್ರಾಂಗೆ 16,640 ಮತ್ತು 16,490 ರೂಪಾಯಿಗಳಿಗೆ ತಲುಪಿದೆ.

ಮದುವೆ ಹಾಗೂ ಹಬ್ಬದ ಸೀಜನ್‌ ಹಿನ್ನೆಲೆಯಲ್ಲಿ, ಚಿನ್ನದ ಖರೀದಿಯಲ್ಲಿ ಏರಿಕೆಯಾಗಿದ್ದರಿಂದ, ಚಿನ್ನದ ದರದಲ್ಲಿ ಕೂಡಾ ಏರಿಕೆಯಾಗಿದೆ ಎಂದು ಮಾರುಕಟ್ಟೆಯ ಡೀಲರ್‌ಗಳು ತಿಳಿಸಿದ್ದಾರೆ.

ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ದರ ಪ್ರತಿ ಔನ್ಸ್‌ಗೆ 1,076.10ಡಾಲರ್‌ಗಳಿಗೆ ತಲುಪಿದೆ. ಕಳೆದ ರಾತ್ರಿ ನ್ಯೂಯಾರ್ಕ್ ಮಾರುಕಟ್ಟೆಯಲ್ಲಿ ಚಿನ್ನದ ದರ ಪ್ರತಿ ಔನ್ಸ್‌ಗೆ 1,093.40 ಔನ್ಸ್‌ಗಳಿಗೆ ತಲುಪಿತ್ತು.

ಬೆಳ್ಳಿ ದರದಲ್ಲಿ ಕೂಡಾ ಪ್ರತಿ ಕೆಜಿಗೆ 100 ರೂಪಾಯಿಗಳ ಏರಿಕೆಯಾಗಿ, 24,750 ರೂಪಾಯಿಗಳಿಗೆ ತಲುಪಿದೆ ಎಂದು ಚಿನಿವಾರಪೇಟೆಯ ವರ್ತಕರು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ