ಸತ್ಯಂ ಹಗರಣದಲ್ಲಿ ಭಾಗಿಯಾಗಿದೆ ಎನ್ನಲಾದ ಹೈದ್ರಾಬಾದ್ ಮೂಲದ ಲೆಕ್ಕಪರಿಶೋಧ ಸಂಸ್ಥೆಗಳ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳುವಂತೆ ಇನ್‌ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಂಕೌಂಟೆಟ್ಸ್ ಆಫ್ ಇಂಡಿಯಾದ ಉನ್ನತ ಮಟ್ಟದ ಸಮಿತಿ, ಹಗರಣ ಹೊರಬಂದ ಒಂದು ವರ್ಷದ ನಂತರ ಶಿಫಾರಸ್ಸು ಮಾಡಿದೆ.
ಕೇಂದ್ರ ಸರಕಾರದಿಂದ ನೇಮಕಗೊಂಡ ಐಸಿಎಐ ಸಮಿತಿ, ಕೃಷ್ಣಾ ಆಂಡ್ ಪ್ರಸಾದ್ ರಾವ್ ಆಂಡ್ ಶ್ಯಾಮ್,ಪಿ.ವಿ.ವಿಶ್ವನಾಥ್ ಆಂಡ್ ಅಸೋಸಿಯೇಟ್ಸ್ ಮತ್ತು ಜಿಎಂಕೆ ಅಸೋಸಿಯೇಟ್ಸ್ ವಿರುದ್ಧ ದೋಷಾರೋಪಣೆ ಪಟ್ಟಿಯನ್ನು ಸಲ್ಲಿಸಿದೆ.
ಸಮಿತಿಯ ವರದಿಯನ್ನು ಐಸಿಎಐ ಅಪೆಕ್ಸ್ ಸಮಿತಿ ಪರಿಶೀಲನೆ ನಡೆಸುತ್ತಿದ್ದು, ದೋಷಾರೋಪಣೆ ಸಲ್ಲಿಸಿದ ಲೆಕ್ಕಪರಿಶೋಧಕ ಸಂಸ್ಥೆಗಳು 19 ಕಂಪೆನಿಗಳ 1,200 ಕೋಟಿ ರೂಪಾಯಿಗಳ ವಹಿವಾಟಿನ ಲೆಕ್ಕ ಪರಿಶೋಧನೆ ಕಾರ್ಯವನ್ನು ಮಾಡುತ್ತಿದ್ದವು ಎಂದು ಸಮಿತಿ ವರದಿಯಲ್ಲಿ ಬಹಿರಂಗಪಡಿಸಿದೆ.