ದೇಶದಲ್ಲಿ ಲಭ್ಯವಿರುವ ಬೃಹತ್ ಕಬ್ಬಿಣ ಅದಿರು ಸಂಪತ್ತು ರಫ್ತನ್ನು ನಿಷೇಧಿಸಿ,ದೇಶಿಯ ಉಕ್ಕು ಉತ್ಪಾದನೆ ಯೋಜನೆಗಳಿಗೆ ಬಳಸಿಕೊಳ್ಳಬೇಕು ಎಂದು ಟಾಟಾ ಸ್ಟೀಲ್ ಸಲಹೆಗಾರರು ಹೇಳಿದ್ದಾರೆ.
ವಿದೇಶಗಳಿಗೆ ಕಬ್ಬಿಣ ಅದಿರು ರಫ್ತು ಮಾಡುವುದರಿಂದ ದೇಶದ ಅಭಿವೃದ್ಧಿಗೆ ಮಾರಕವಾಗುತ್ತದೆ. ರಫ್ತಿಗೆ ನಿಷೇಧ ಹೇರಬೇಕು. ದೇವರು ನೀಡಿದ ಅಮೂಲ್ಯ ಸಂಪತ್ತನ್ನು ರಫ್ತು ಮಾಡುವುದು ಬೇಡ ಎಂದು ಅಮಿತ್ ಚಟರ್ಜಿ ಸಲಹೆ ನೀಡಿದರು.
ಗ್ಲೋಬಲ್ ಸ್ಟೀಲ್ ಕಾನ್ಫ್‌ರೆನ್ಸ್‌ನ ವರ್ಲ್ಡ್ ಸ್ಟೀಲ್ ಇಂಡಸ್ಟ್ರೀ ಶೇರುದಾರರ ಸಭೆಯಲ್ಲಿ ಮಾತನಾಡಿದ ಚಟರ್ಜಿ, ಕಬ್ಬಿಣದ ಅದಿರನ್ನು ಸಾಗರೋತ್ತರ ದೇಶಗಳಿಗೆ ರಫ್ಚು ಮಾಡುವುದು ಸೂಕ್ತವಲ್ಲ.ರಫ್ತಿಗೆ ನಿಷೇಧ ಹೇರಬೇಕು ಎಂದು ಕಿಡಿಕಾರಿದ್ದಾರೆ.
ಉನ್ನತ ಮಟ್ಟದ ಕಬ್ಬಿಣದ ಅದಿರು ರಫ್ತು ನಿಷೇಧಿಸಿ.ಕಳಪೆ ಗುಣಮಟ್ಟದ ಕಬ್ಬಿಣದ ಅದಿರುವ ಭಿನ್ನ ಸಂಗತಿ ಎಂದು ಚಟರ್ಜಿ,ಬದಲಾದ ಜಾಗತಿಕ ಆರ್ಥಿಕತೆಯ ಸನ್ನಿವೇಶದಲ್ಲಿ ಭಾರತದ ಉಕ್ಕು ಉದ್ಯಮದ ಮುಂದಿರುವ ಸವಾಲುಗಳು ಹಾಗೂ ಅವಕಾಶಗಳು ಎನ್ನುವ ವಿಷಯ ಕುರಿತಂತೆ ತಮ್ಮ ಅಭಿಪ್ರಾಯಗಳನ್ನು ಚಟರ್ಜಿ ಮಂಡಿಸಿದರು.