ದೇಶಿಯ ಶೇರುಪೇಟೆ ಚೇತರಿಕೆಯಿಂದಾಗಿ ವಿದೇಶಿ ಬಂಡವಾಳದ ಒಳಹರಿವು ಹೆಚ್ಚಳವಾಗಿದ್ದರಿಂದ, ಡಾಲರ್ ಎದುರಿಗೆ ರೂಪಾಯಿ ಮೌಲ್ಯದಲ್ಲಿ 11 ಪೈಸೆ ಚೇತರಿಕೆ ಕಂಡು 46.39 ರೂಪಾಯಿಗಳಿಗೆ ತಲುಪಿದೆ.
ವಿದೇಶಿ ವಿನಿಮಯ ಮಾರುಕಟ್ಟೆಯ ಹಿಂದಿನ ದಿನದ ವಹಿವಾಟಿನ ಮುಕ್ತಾಯಕ್ಕೆ 2ಪೈಸೆ ಕುಸಿತ ಕಂಡು 46.50/51ರೂಪಾಯಿಗಳಿಗೆ ತಲುಪಿತ್ತು. ಆದರೆ ಇಂದಿನ ಆರಂಭಿಕ ವಹಿವಾಟಿನಲ್ಲಿ ಡಾಲರ್ ಎದುರಿಗೆ ರೂಪಾಯಿ 11ಪೈಸೆ ಏರಿಕೆ ಕಂಡು 46.39 ರೂಪಾಯಿಗಳಿಗೆ ತಲುಪಿದೆ.
ದೇಶಿಯ ಮಾರುಕಟ್ಟೆಯ ವಹಿವಾಟಿನಲ್ಲಿ ಚೇತರಿಕೆಯಾಗಿದ್ದರಿಂದ ವಿದೇಶಿ ಬಂಡವಾಳದ ಒಳಹರಿವು ಹೆಚ್ಚಳವಾಗಿ, ಫಾರೆಕ್ಸ್ ಮಾರುಕಟ್ಟೆ ಚೇತರಿಕೆ ಕಂಡಿದೆ ಎಂದು ಮಾರುಕಟ್ಟೆಯ ಡೀಲರ್‌ಗಳು ತಿಳಿಸಿದ್ದಾರೆ.
ಮುಂಬೈ ಶೇರುಪೇಟೆಯ ಇಂದಿನ ಆರಂಭಿಕ ವಹಿವಾಟಿನಲ್ಲಿ, ಶೇರುಪೇಟೆ ಸೂಚ್ಯಂಕ 74.45 ಪಾಯಿಂಟ್‌ಗಳಿಗೆ ಏರಿಕೆ ಕಂಡು 16,227.04 ಅಂಕಗಳಿಗೆ ತಲುಪಿದೆ.