ಅಹಾರ ಧಾನ್ಯ ದರಗಳ ಏರಿಕೆಯಿಂದಾಗಿ ಸಗಟು ಸೂಚ್ಯಂಕ ದರ,ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಜನೆವರಿ ತಿಂಗಳ ಅವಧಿಯಲ್ಲಿ ಶೇ.8.56ಕ್ಕೆ ಏರಿಕೆ ಕಂಡಿದೆ ಎಂದು ವಾಣಿಜ್ಯ ಅಧಿಕಾರಿಗಳು ಅಂಕಿಅಂಶಗಳನ್ನು ಬಿಡುಗಡೆ ಮಾಡಿದ್ದಾರೆ.
ಹಣದುಬ್ಬರ ದರ ಕಳೆದ ವರ್ಷದ ಡಿಸೆಂಬರ್ ತಿಂಗಳಿಗೆ ಹೋಲಿಸಿದಲ್ಲಿ, ಪ್ರಸಕ್ತ ಡಿಸೆಂಬರ್ ತಿಂಗಳ ಅವಧಿಯಲ್ಲಿ ಶೇ.7.31ಕ್ಕೆ ತಲುಪಿದೆ.
ಜನೆವರಿ ಪರಿಷ್ಕರಣ ಸಭೆಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್, ಹಣದುಬ್ಬರದ ಸಗಟು ಸೂಚ್ಯಂಕ ದರ ಮಾರ್ಚ್ 2010ರ ವೇಳೆಗೆ ಶೇ.6.5ರಿಂದ ಶೇ.8.5ಕ್ಕೆ ಏರಿಕೆ ಕಾಣಲಿದೆ ಎಂದು ಸಮೀಕ್ಷಾ ವರದಿಯಲ್ಲಿ ತಿಳಿಸಿತ್ತು.
ಗ್ರಾಹಕ ಸೂಚ್ಯಂಕ ದರಕ್ಕಿಂತ ಸಗಟು ಸೂಚ್ಯಂಕ ದರದಲ್ಲಿ, ಹೆಚ್ಚಿನ ಉತ್ಪನ್ನಗಳಿರುವುದರಿಂದ ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ ಎಂದು ವಿತ್ತಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.