ಕಳೆದ 2009ರಲ್ಲಿ ವಿಶ್ವ ಆರ್ಥಿಕತೆಯಲ್ಲಿ ಎರಡನೇ ಸ್ಥಾನವನ್ನು ಪಡೆದ ಜಪಾನ್, ಚೀನಾ ದೇಶವನ್ನು ಮೂರನೇ ಸ್ಥಾನಕ್ಕೆ ತಳ್ಳಿದೆ. ಆದರೆ 40 ವರ್ಷಗಳಿಂದ ಅಗ್ರಸ್ಥಾನದಲ್ಲಿದ್ದ ಜಪಾನ್ ತನ್ನ ಸ್ಥಾನವನ್ನು ಕಳೆದುಕೊಳ್ಳುವ ಭೀತಿಯನ್ನು ಎದುರಿಸುತ್ತಿದೆ ಎಂದು ಅಧಿಕಾರಿ ಮೂಲಗಳು ತಿಳಿಸಿವೆ.
ಕಳೆದ ವರ್ಷದಲ್ಲಿ ಜಪಾನ್, ಒಟ್ಟು ದೇಶಿಯ ಉತ್ಪನ್ನದಲ್ಲಿ 5.1ಟ್ರಿಲಿಯನ್ ಡಾಲರ್‌ಗಳಿಗೆ ತಲುಪಿತ್ತು ಎಂದು ವಾಣಿಜ್ಯ ಅಧಿಕಾರಿಗಳು ತಿಳಿಸಿದ್ದಾರೆ..ಚೀನಾ ದೇಶದ ಒಟ್ಟು ದೇಶಿಯ ಉತ್ಪನ್ನ 4.9 ಟ್ರಿಲಿಯನ್ ಟಾಲರ್‌ಗಳಿಗೆ ತಲುಪಿತ್ತು.
ಚೀನಾ 2010ರಲ್ಲಿ ಸಂಪೂರ್ಣ ಚೇತರಿಕೆ ಕಾಣುವ ನಿರೀಕ್ಷೆಯನ್ನು ವ್ಯಕ್ತಪಡಿಸಿದೆ.ಆದರೆ ಜಪಾನ್ ದೇಶದಲ್ಲಿ ಎದುರಾಗಿರುವ ಜನಸಂಖ್ಯೆ ಕುಸಿತದ ಸಮಸ್ಯೆ ಹಾಗೂ ಹಣದುಬ್ಬರದಿಂದಾಗಿ ಮೂರನೇ ಸ್ಥಾನಕ್ಕೆ ತಳ್ಳಲ್ಪಡುವ ಸಾಧ್ಯತೆಗಳಿವೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.