ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಸೀರೆಗಳು ಸಂಗೀತವಾ ಹಾಡಿವೆ (Silk saree | Andhra designer | Singing saree | Swaramadhuri)
Bookmark and Share Feedback Print
 
PTI
ಅನಂತಪುರ: ದಕ್ಷಿಣ ಭಾರತದ ರೇಷ್ಮೆ ಸೀರೆ ಉದ್ಯಮದ ಕೀರ್ತಿ ಪತಾಕೆಗೆ ಹೊಸದೊಂದು ಗರಿ. ಇದೀಗ ಸಂಗೀತದ ಸ್ವರ ಮಾಧುರ್ಯವನ್ನು ಹೊರಡಿಸುವ ಸೀರೆಗಳು ಕೂಡ ಮಾರುಕಟ್ಟೆಗೆ ಲಗ್ಗೆಯಿಡಲು ಸಿದ್ಧವಾಗಿದ್ದು, ಮಹಿಳಾ ಬಣದ ಕಲರವಕ್ಕೆ ಹಿನ್ನೆಲೆಯಾಗಿ ಸಂಗೀತವೂ ಗುನುಗುನಿಸಲಿದೆ.

'ಸ್ವರಮಾಧುರಿ' ಹೆಸರಿನ ಈ 'ಹಾಡುವ ಸೀರೆ', ಸುಮಾರು ನಾಲ್ಕು ಗಂಟೆಗಳ ಕಾಲ ಸಂಗೀತವನ್ನು ಹೊರಡಿಸುತ್ತದೆ ಎಂದು ಉದ್ಯಮದ ಮೂಲಗಳು ತಿಳಿಸಿವೆ. ಈ ರೇಷ್ಮೆ ಸೀರೆಯ ಬಾರ್ಡರ್‌ನಲ್ಲಿ ಎಂಟು ಮೈಕ್ರೋಸ್ಪೀಕರ್‌ಗಳನ್ನು ಅಳವಡಿಸಲಾಗಿದೆ.

ದಕ್ಷಿಣ ಭಾರತದಲ್ಲಿ ಸ್ವರಮಾಧುರಿ ಹೊರಡಿಸುವ ಸೀರೆಗೆ ನೀರೆಯರಿಂದ ಭಾರಿ ಬೇಡಿಕೆ ವ್ಯಕ್ತವಾಗಿದೆ ಎಂದು ಮಾರುಕಟ್ಟೆಯ ವಹಿವಾಟುದಾರರು ತಿಳಿಸಿದ್ದಾರೆ.

ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಧರ್ಮಾವರಂ ಪಟ್ಟಣದಲ್ಲಿರುವ ವಿನ್ಯಾಸಕಾರ ಪಿ.ಮೋಹನ್ ಸ್ವರಮಾಧುರಿ ಸೀರೆಯನ್ನು ಸಿದ್ಧಪಡಿಸಿದ್ದಾರೆ. ಅಂಚುಗಳಲ್ಲಿ ಎಂಟು ಮೈಕ್ರೋ ಸ್ಪೀಕರ್‌ಗಳಿದ್ದರೆ, ಸೀರೆಯ ಪಲ್ಲು (ಸೆರಗು) ತುದಿಯಲ್ಲಿ ಚಿಕ್ಕದಾದ ಡಿಜಿಟಲ್ ಮ್ಯೂಸಿಕ್ ಪ್ಲೇಯರ್‌‌ನಿಂದ ಸುಮಾರು 200 ಹಾಡುಗಳನ್ನು ನಾಲ್ಕು ಗಂಟೆಗಳ ಅವಧಿಯವರೆಗೆ ನಿರಂತರವಾಗಿ ಕೇಳಬಹುದಾಗಿದೆ. ಸೀರೆಯಲ್ಲಿರುವ ಸಾಧನಕ್ಕೆ ಬೆಂಬಲ ನೀಡಲು 2ಜಿಬಿ ಮೆಮೊರಿ ಚಿಪ್ ಬಳಸಲಾಗಿದೆ ಎಂದು ಮೋಹನ್ ತಿಳಿಸಿದ್ದಾರೆ.

ಫ್ಯಾಶನ್ ಡಿಸೈನಿಂಗ್‌ನಲ್ಲಿ ಡಿಪ್ಲೊಮಾ ಪದವಿ ಪಡೆದ ಮೋಹನ್ ಹಾಡು ಹೇಳುವ ವಿಶಿಷ್ಟ ಸೀರೆಗಳನ್ನು ಸಿದ್ಧಪಡಿಸಲು ಸುಮಾರು ಎರಡು ತಿಂಗಳ ಅವಧಿ ಬೇಕಾಯಿತು. ರೇಷ್ಮೆ ವರ್ತಕರು ಸೀರೆಗಳ ಖರೀದಿಗೆ ಅಪಾರ ಬೇಡಿಕೆಯನ್ನು ಸಲ್ಲಿಸಿದ್ದಾರೆ ಎಂದು ಹೇಳಿದ್ದಾರೆ.

'ಸ್ವರಮಾಧುರಿ' ಸೀರೆಗಳ ಹಕ್ಕನ್ನು ಖರೀದಿಸಿದ ಬಿ.ದತ್ತಾ ಶಿವಾ ಮಾತನಾಡಿ, ತಮಿಳುನಾಡು, ಆಂಧ್ರಪ್ರದೇಶ ಮತ್ತು ಕೇರಳ ರಾಜ್ಯಗಳಿಂದ ಭಾರಿ ಬೇಡಿಕೆ ಬಂದಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ವಿನ್ಯಾಸಕಾರರಾದ ಶಿವಾ ಮತ್ತು ಮೋಹನ್, ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮಿಯವರ ಕಟ್ಟಾ ಭಕ್ತರಾದ ಹಿನ್ನೆಲೆಯಲ್ಲಿ ಸ್ವಾಮಿಯವರನ್ನು ಹಾಡಿ ಹೊಗಳುವ ಸಂಗೀತವನ್ನು ಸೇರಿಸಿದ್ದಾರೆ.

ಉದ್ಯಮಿ, ಸೀರೆಯ ವಿನ್ಯಾಸಕಾರರಾದ ಮೋಹನ್, ಈ ಮೊದಲು ಚಿಕ್ಕದಾದ ಎಲ್‌ಇಡಿ ಬಲ್ಬ್‌ಗಳನ್ನು ಸೀರೆಗೆ ಅಳವಡಿಸಿದ್ದು, ಲೈಟಿಂಗ್ ಸೀರೆಗಳು ಎಂದು ಖ್ಯಾತಿಯನ್ನು ಪಡೆದಿವೆ.

ಸುಗಂಧ ಸೀರೆ:
ಗಂಧದ ಕೊರಡಿನಿಂದ ಕೂಡಾ ರೇಷ್ಮೆ ಸೀರೆಗಳನ್ನು ತಯಾರಿಸಲಾಗುತ್ತಿದೆ. ಗಂಧದ ರೇಷ್ಮೆ ಸೀರೆಗಳಿಗೆ ಭಾರಿ ಬೇಡಿಕೆಯಿದೆ. ದಕ್ಷಿಣ ಭಾರತದ ಎಲ್ಲ ರಾಜ್ಯಗಳಿಂದ ಬೇಡಿಕೆ ಬಂದಿವೆ. ಆದರೆ ಸಮಯದ ಅಭಾವದಿಂದಾಗಿ ಬೇಡಿಕೆಗಳನ್ನು ಪೂರೈಸಲು ನಮಗೆ ಸಾಧ್ಯವಾಗುತ್ತಿಲ್ಲ ಎಂದು ಉದ್ಯಮಿ ಶಿವಾ ಹೇಳಿದ್ದಾರೆ.

ಕರ್ನಾಟಕ ಸರಕಾರದ ಮಾಲೀಕತ್ವದ ಗಂಧದ ಮಳಿಗೆಯಿಂದ ಖರೀದಿಸಿದ ಪರಿಶುದ್ಧ ಗಂಧವನ್ನು ಬಳಸುವುದರಿಂದ, ಗಂಧದ ರೇಷ್ಮೆ ಸೀರೆಗಳಲ್ಲಿ ಸುವಾಸನೆ ಶಾಶ್ವತವಾಗಿರುತ್ತದೆ ಎಂದು ಮೋಹನ್ ಹೇಳುತ್ತಾರೆ.

ಸುಮಾರು 300 ಕೋಟಿ ರೂಪಾಯಿಗಳ ರೇಷ್ಮೆ ಸೀರೆ ಹಾಗೂ ಉಡುಗೆ ಸಾಮಗ್ರಿಗಳ ವಹಿವಾಟು ಹೊಂದಿದೆ. ಆದರೆ ಧರ್ಮಾವರಂ ಸೀರೆ ನೇಕಾರರು ಸ್ವರಮಾಧುರಿ ಸೀರೆಯು ಯಶಸ್ವಿನ ಹಾಡನ್ನು ಹಾಡುತ್ತದೆಯೇ ಎಂದು ಕಾದು ನೋಡಬೇಕಿದೆ.
ಸಂಬಂಧಿತ ಮಾಹಿತಿ ಹುಡುಕಿ