ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಟಾಟಾ ವಾಹನಗಳ ಮಾರಾಟದಲ್ಲಿ ಶೇ.93ರಷ್ಟು ಏರಿಕೆ (Tata Motors | commercial | passenger vehicles| Jaguar Land Rover)
Bookmark and Share Feedback Print
 
ವಾಣಿಜ್ಯ ಮತ್ತು ಪ್ರಯಾಣಿಕ ವಾಹನಗಳ ಬೇಡಿಕೆಯಲ್ಲಿ ಹೆಚ್ಚಳವಾಗಿದ್ದರಿಂದ ಜನೆವರಿ ತಿಂಗಳ ಅವಧಿಯಲ್ಲಿ 85,714 ವಾಹನಗಳನ್ನು ಮಾರಾಟ ಮಾಡಲಾಗಿದ್ದು, ವಾಹನಗಳ ಮಾರಾಟದಲ್ಲಿ ಶೇ.93ರಷ್ಟು ಏರಿಕೆ ಕಂಡಿದೆ.

ಜನೆವರಿ ತಿಂಗಳ ಅವಧಿಯಲ್ಲಿ ಐಷಾರಾಮಿ ಕಾರುಗಳಾದ ಜಾಗ್ವಾರ್ ಲಾಂಡ್ ರೋವರ್‌ನ 16,269 ವಾಹನಗಳನ್ನು ಮಾರಾಟ ಮಾಡಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಶೇ.195ರಷ್ಟು ಏರಿಕೆ ಕಂಡಿದೆ ಎಂದು ಟಾಟಾ ಮೋಟಾರ್ಸ್ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.

ಜನೆವರಿ ತಿಂಗಳ ಅವಧಿಯಲ್ಲಿ 45,380 ಪ್ರಯಾಣಿಕ ವಾಹನಗಳನ್ನು ಮಾರಾಟ ಮಾಡಲಾಗಿದ್ದು, ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಶೇ.76ರಷ್ಟು ಏರಿಕೆ ಕಂಡಿದೆ.ವಾಣಿಜ್ಯ ವಾಹನಗಳ ಮಾರಾಟದಲ್ಲಿ ಶೇ.115ರಷ್ಟು ಏರಿಕೆಯಾಗಿದ್ದು,40,334 ವಾಹನಗಳನ್ನು ಮಾರಾಟ ಮಾಡಲಾಗಿದೆ.

ಏಪ್ರಿಲ್‌2009ರಿಂದ ಜನೆವರಿ2010ರವರೆಗೆ ಒಟ್ಟು ವಾಹನಗಳ ಮಾರಾಟದಲ್ಲಿ ಶೇ.13ರಷ್ಟು ಏರಿಕೆಯಾಗಿ 681,480ವಾಹನಗಳನ್ನು ಮಾರಾಟ ಮಾಡಲಾಗಿದೆ ಎಂದು ಟಾಟಾ ಮೋಟಾರ್ಸ್ ಅಧಿಕಾರಿಗಳು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ