ಪ್ರಸಕ್ತ ವರ್ಷದಲ್ಲಿ ಕೇಂದ್ರ ಸರಕಾರ 24 ಮೆಟ್ರಿಕ್ ಟನ್ ಗೋಧಿಯನ್ನು ಖರೀದಿಸಲು ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ
ದೇಶಕ್ಕೆ ಅಗತ್ಯವಾದ ಗೋಧಿಯ ಸಂಗ್ರಹವನ್ನು ಪರಿಶೀಲಿಸಿದ ನಂತರ 24ಮೆಟ್ರಿಕ್ ಟನ್ ಗೋಧಿಯನ್ನು ಖರೀದಿಸಲು ನಿರ್ಧರಿಸಲಾಗಿದೆ ಎಂದು ಹಿರಿಯ ಸರಕಾರಿ ಅಧಿಕಾರಿಗಳು ತಿಳಿಸಿದ್ದಾರೆ.ಕಳೆದ ವರ್ಷ 215.3 ಟನ್ ಘೋದಿಯನ್ನು ಖರೀದಿಸಲಾಗಿತ್ತು.
ಹೆಚ್ಚುವರಿ ಗೋಧಿಯನ್ನು ಖರೀದಿಸುವ ನಿರ್ಧಾರ ಏಪ್ರಿಲ್ ಮತ್ತು ಜೂನ್ ತಿಂಗಳುಗಳಲ್ಲಿನ ದರಗಳ ಮೇಲೆ ಅವಲಂಬಿತವಾಗಿರುತ್ತದೆ.ಪ್ರಸ್ತುತ ಗೋಧಿಯ ದರ ಪ್ರತಿ ಕ್ವಿಂಟಾಲ್‌ಗೆ 1,360 ರೂಪಾಯಿಗಳಿಗೆ ತಲುಪಿದೆ.ಸರಕಾರ 1,100 ರೂಪಾಯಿ ಬೆಂಬಲ ಬೆಲೆಯನ್ನು ಘೋಷಿಸಿದೆ.
ಗೋಧಿ ಖರೀದಿಯಲ್ಲಿ ಹೆಚ್ಚಳ ಅಥವಾ ಕಡಿಮೆ ಖರೀದಿಸುವುದು ದರಗಳ ಮೇಲೆ ಸಂಪೂರ್ಣವಾಗಿ ನಿರ್ಭರವಾಗಿರುತ್ತದೆ ಎಂದಪ ಅಧಿಕಾರಿಗಳು ತಿಳಿಸಿದ್ದಾರೆ.
ದೇಶದ ಗೋಧಿ ಸಂಗ್ರಹದ ಅಗತ್ಯತೆ 80.26 ಮೆಟ್ರಕ್ ಟನ್‌ಗಳಾಗಿವೆ.ಕಳೆದ 2008-09ರ ಅವಧಿಯಲ್ಲಿ ಗೋಧಿ ಬಂಪರ್ ಬೆಳೆಯಾಗಿ ಹೊರಹೊಮ್ಮಿದ್ದರಿಂದ 80.68 ಮೆಟ್ರಿಕ್ ಟನ್‌ಗಳಾಗಿವೆ.