ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಫಾರೆಕ್ಸ್: ರೂಪಾಯಿ ಮೌಲ್ಯದಲ್ಲಿ 5 ಪೈಸೆ ಚೇತರಿಕೆ (Rupee | Sensex | Interbank | Foreign Exchange)
Bookmark and Share Feedback Print
 
ಶೇರುಪೇಟೆಯಲ್ಲಿ ವಿದೇಶಿ ಬಂಡವಾಳದ ಒಳಹರಿವು ಹೆಚ್ಚಳವಾದ ಹಿನ್ನೆಲೆಯಲ್ಲಿ, ಡಾಲರ್ ಎದುರಿಗೆ ರೂಪಾಯಿ 5 ಪೈಸೆ ಏರಿಕೆ ಕಂಡಿದೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ.

ವಿದೇಶಿ ವಿನಿಮಯ ಮಾರುಕಟ್ಟೆಯ ಹಿಂದಿನ ದಿನದ ವಹಿವಾಟಿನ ಮುಕ್ತಾಯಕ್ಕೆ 18 ಪೈಸೆ ಏರಿಕೆ ಕಂಡು 46.32/33 ರೂಪಾಯಿಗಳಿಗೆ ಮುಕ್ತಾಯವಾಗಿತ್ತು. ಇಂದಿನ ಆರಂಭಿಕ ವಹಿವಾಟಿನಲ್ಲಿ ಕೂಡಾ ಡಾಲರ್ ಎದುರಿಗೆ 5 ಪೈಸೆ ಏರಿಕೆ ಕಂಡು 46.27 ರೂಪಾಯಿಗಳಿಗೆ ತಲುಪಿದೆ.

ವಿದೇಶಿ ಬಂಡವಾಳ ಹೂಡಿಕೆದಾರರಿಂದ ಹೂಡಿಕೆಯ ಒಳಹರಿವು ಹೆಚ್ಚಳ ಹಾಗೂ ದೇಶಿಯ ಕರೆನ್ಸಿಗಳ ಎದುರು ಡಾಲರ್ ಮೌಲ್ಯದಲ್ಲಿ ಕುಸಿತವಾಗಿರುವುದು ರೂಪಾಯಿ ಮೌಲ್ಯದ ಚೇತರಿಕೆಗೆ ಕಾರಣವಾಗಿದೆ ಎಂದು ಫಾರೆಕ್ಸ್ ಡೀಲರ್‌ಗಳು ತಿಳಿಸಿದ್ದಾರೆ.

ಏತನ್ಮಧ್ಯೆ, ಶೇರುಪೇಟೆ ಇಂದಿನ ಆರಂಭಿಕ ವಹಿವಾಟಿನಲ್ಲಿ 97.64 ಪಾಯಿಂಟ್‌‌ಗಳ ಏರಿಕೆ ಕಂಡು 16,135.99 ಅಂಕಗಳಿಗೆ ತಲುಪಿದೆ.
ಸಂಬಂಧಿತ ಮಾಹಿತಿ ಹುಡುಕಿ