ಉದ್ಯೋಗ ಅಕಾಂಕ್ಷಿಗಳ ಸಾಲಿನಲ್ಲಿ ವಿಶ್ವದಲ್ಲಿಯೇ ಭಾರತ ಅಗ್ರಸ್ಥಾನಪಡೆದಿದೆ. ದೇಶದ ಶೇ.72ರಷ್ಟು ಉದ್ಯೋಗಿಗಳು ತಮ್ಮ ವೈಯಕ್ತಿಕ ಏಳಿಗೆ ಹಾಗೂ ಕಂಪೆನಿಯ ಭವಿಷ್ಯದ ಬಗ್ಗೆ ಆತ್ಮವಿಶ್ವಾಸವನ್ನು ಹೊಂದಿದ್ದಾರೆ ಎಂದು ಸಮೀಕ್ಷೆ ನಡೆಸಿದ ಅಧ್ಯಯನ ವರದಿಯಲ್ಲಿ ಬಹಿರಂಗಪಡಿಸಲಾಗಿದೆ.
ಗ್ಲೋಬಲ್ ಎಚ್‌ಆರ್ ಸಲ್ಯೂಶನ್ಸ್ ಸೇವಾ ಸಂಸ್ಥೆ ಕೆನೆಕ್ಸಾ ಸಮೀಕ್ಷೆಯನ್ನು ನಡೆಸಿದ್ದು, ವಿಶ್ವದಲ್ಲಿ ಶೇ.56ರಷ್ಟು ಜನತೆ ಸರಾಸರಿ ಉದ್ಯೋಗ ಅಕಾಂಕ್ಷಿಗಳಾಗಿದ್ದಾರೆ. ಭಾರತೀಯ ಶೇ.72ರಷ್ಟು ಉದ್ಯೋಗಿಗಳು ಉದ್ಯೋಗದ ಬಗ್ಗೆ ಆಸಕ್ತಿಯನ್ನು ಹೊಂದಿದ್ದು, ಅಗ್ರಸ್ಥಾನದಲ್ಲಿದ್ದಾರೆ. ಜಪಾನ್‌ನ ಕೇವಲ ಶೇ.41ರಷ್ಟು ಉದ್ಯೋಗಿಗಳು ಉದ್ಯೋಗದ ಬಗ್ಗೆ ಆಸಕ್ತಿಯನ್ನು ಹೊಂದಿದ್ದು, ಕೊನೆಯ ಸ್ಥಾನದಲ್ಲಿದೆ ಎಂದು ವರದಿಯಲ್ಲಿ ಪ್ರಕಟಿಸಿದೆ.
ಆದರೆ ಶೇ.72ರಷ್ಟು ಭಾರತೀಯರು ಉದ್ಯೋಗದಲ್ಲಿ ಗಾಢಾನುರಕ್ತರಾಗಿದ್ದು, ವಿಶ್ವದಲ್ಲಿ ಅಗ್ರಸ್ಥಾನದಲ್ಲಿದ್ದಾರೆ ಎಂದು ಪ್ರಕಟಿಸಿದೆ.
ಭಾರತದ ನಂತರದ ಸ್ಥಾನವನ್ನು ಬ್ರೆಜಿಲ್ ಶೇ.63ರಷ್ಟು, ಕೆನಡಾ ಶೇ.60 ಮತ್ತು ಅಮೆರಿಕ ಹಾಗೂ ಜರ್ಮನಿ ದೇಶಗಳ ಶೇ.59ರಷ್ಟು ಜನತೆ ಉದ್ಯೋಗದಲ್ಲಿ ಆಸಕ್ತಿಯನ್ನು ಹೊಂದಿದ್ದಾರೆ.ಸೌದಿ ಅರೇಬಿಯಾ ಮತ್ತು ರಷ್ಯಾದ ಶೇ.58ರಷ್ಟು ಉದ್ಯೋಗಿಗಳು ಉದ್ಯೋಗದಲ್ಲಿ ಆಸಕ್ತಿಯನ್ನು ಹೊಂದಿದ್ದಾರೆ.
ಕೌಶಲತೆ ಹಾಗೂ ಸಾಮರ್ಥ್ಯವನ್ನು ಹೊಂದಿರುವುದರಿಂದ ಭಾರತೀಯರು ಉದ್ಯೋಗದ ಬಗ್ಗೆ ತುಂಬಾ ಆಸಕ್ತಿಯುಳ್ಳವರಾಗಿದ್ದಾರೆ.ಕಂಪೆನಿಗಳು ಉದ್ಯೋಗಿಗಳ ಕಾರ್ಯಕ್ಷಮತೆ ಹಾಗೂ ಉದ್ಯೋಗಿಗಳ ಜೀವನಶೈಲಿಯ ಸಮತೋಲನಕ್ಕೆ ಬೆಂಬಲ ನೀಡುವುದರಿಂದ, ಉದ್ಯೋಗಿಗಳು ಕಂಪೆನಿಯ ಏಳಿಗೆಗಾಗಿ ದುಡಿಯುತ್ತಾರೆ. ಉತ್ತಮ ಪರಿಶ್ರಮಕ್ಕೆ, ಜಾಣ್ಮೆಗೆ, ಕೌಶಲತೆಗೆ ಭಾರತದಲ್ಲಿ ಕಂಪೆನಿಗಳು ಬೆಂಬಲ ನೀಡುತ್ತವೆ ಎಂದು ಕೆನೆಕ್ಸಾ ಅಧ್ಯಯನ ವರದಿಯಲ್ಲಿ ಬಹಿರಂಗಪಡಿಸಿದೆ.