ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಸಕ್ಕರೆ ರಫ್ತು ನಿರ್ಧಾರಕ್ಕೆ ಪ್ರತಿಪಕ್ಷಗಳ ವ್ಯಾಪಕ ಟೀಕೆ (Sugar | Export | Congress)
Bookmark and Share Feedback Print
 
ಸಕ್ಕರೆ ದರ ಏರಿಕೆಯ ಮಧ್ಯೆಯು, ಯುರೋಪ್‌ ರಾಷ್ಟ್ರಗಳಿಂದ 10 ಸಾವಿರ ಟನ್ ಸಕ್ಕರೆ ರಫ್ತು ಮಾಡಲು ನಿರ್ಧರಿಸಿರುವ ಕೇಂದ್ರ ಸರಕಾರದ ಕ್ರಮಕ್ಕೆ ವ್ಯಾಪಕ ಟೀಕೆಗಳು ಎದುರಾಗಿದ್ದು, ಕಾಗ್ರೆಸ್‌‌ಗೆ ಕಹಿ ಅನುಭವವಾದಂತಾಗಿದೆ.

ದೇಶದಲ್ಲಿ ಸಕ್ಕರೆಯ ದರಗಳನ್ನು ಗಗನಕ್ಕೇರಿರುವ ಸಮಯದಲ್ಲಿ 10 ಸಾವಿರ ಟನ್ ಸಕ್ಕರೆಯನ್ನು ಯುರೋಪ್ ರಾಷ್ಟ್ರಗಳಿಗೆ ರಫ್ತು ಮಾಡುವ ಸರಕಾರದ ಕ್ರಮವನ್ನು ಕಾಂಗ್ರೆಸ್ ಪಕ್ಷ ಖಂಡಿಸಿದೆ.

ಅಧಿಕಾರ ರೂಢ ಯುಪಿಎ ಸರಕಾರ ದೇಶಿಯ ಮಾರುಕಟ್ಟೆಯಲ್ಲಿ ಸಕ್ಕರೆ ದರದ ಇಳಿಕೆಗಾಗಿ ಪ್ರಯತ್ನಿಸುತ್ತಿರುವ ಸಂದರ್ಭದಲ್ಲಿ ಯುರೋಪ್ ರಾಷ್ಟ್ರಗಳಿಗೆ ಸಕ್ಕರೆ ರಫ್ತು ಮಾಡುವ ನಿರ್ಧಾರಕ್ಕೆ ಸರ್ವಪಕ್ಷಗಳು ಖಂಡಿಸಿವೆ.

ದೇಶದಲ್ಲಿ ಸಕ್ಕರೆಯ ಕೊರತೆಯನ್ನು ಎದುರಿಸುವಂತಹ ಸಂದರ್ಭದಲ್ಲಿ ಸಕ್ಕರೆಯನ್ನು ವಿದೇಶಕ್ಕೆ ರಫ್ತು ಮಾಡುವ ನಿರ್ಧಾರ ಸೂಕ್ತವಲ್ಲ ಎಂದು ಕಾಂಗ್ರೆಸ್ ವಕ್ತಾರ ಮನೀಷ್ ತೆವಾರಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಒಂದು ವೇಳೆ ಸಕ್ಕರೆ ರಫ್ತು ಮಾಡುವ ನಿರ್ಧಾರ ತೆಗೆದುಕೊಂಡಲ್ಲಿ ಸಂಬಂಧಿತ ಅಧಿಕಾರಿಗಳು ಅಥವಾ ಕೃಷಿ ಸಚಿವ ಮತ್ತು ಅವರ ಅಧಿಕಾರಿಗಳು ಜನತೆಗೆ ಉತ್ತರಿಸಬೇಕಾಗುತ್ತದೆ.ಆದಾಗ್ಯೂ ಒಂದು ವೇಳೆ ಅಂತಹ ತೀರ್ಮಾನ ತೆಗೆದುಕೊಂಡಲ್ಲಿ ಸೂಕ್ತ ತೀರ್ಮಾನವಲ್ಲ ಎಂದು ತೆವಾರಿ ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ