ಟಾಟಾ ಮೋಟಾರ್ಸ್ ಸಂಸ್ಥೆಯ ಜಾಗತಿಕ ವಹಿವಾಟಿನ ವೇಗವನ್ನು ಹೆಚ್ಚಿಸಲು, ಜನರಲ್ ಮೋಟಾರ್ಸ್‌ನ ಮಾಜಿ ಅಧಿಕಾರಿ ಕಾರ್ಲ್ ಪೀಟರ್ ಫೊಸ್ಟರ್ ಅವರನ್ನು ನೂತನ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಯಾಗಿ ಟಾಟಾ ಮೋಟಾರ್ಸ್ ಮುಖ್ಯಸ್ಥ ರತನ್ ಟಾಟಾ ಆಯ್ಕೆ ಮಾಡಿದ್ದಾರೆ.
ಟಾಟಾ ಮೋಟಾರ್ಸ್‌ಮ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗ ಕಾರ್ಲ್ ಫೊಸ್ಟರ್, ಜೆಎಲ್‌ಆಲ್ ಮತ್ತು ಟಾಟಾ ಡೆವೂ ಸೇರಿದಂತೆ ಭಾರತದ ವಹಿವಾಟುಗಳನ್ನು ಕೂಡಾ ನಿರ್ವಹಿಸಲಿದ್ದಾರೆ ಎಂದು ರತನ್ ಟಾಟಾ ತಿಳಿಸಿದ್ದಾರೆ.
55 ವರ್ಷ ವಯಸ್ಸಿನ ಜರ್ಮನ್ ರಾಷ್ಟ್ರೀಯತೆಯನ್ನು ಹೊಂದಿರುವ ಕಾರ್ಲ್ ಫೊಸ್ಟರ್ ಅವರು, ಮುಂಬೈ ಮೂಲವಾಗಿಸಿಕೊಂಡು ಕಾರ್ಯನಿರ್ವಹಿಸಲಿದ್ದಾರೆ. ಅವರನ್ನು ಶೀಘ್ರದಲ್ಲಿ ಟಾಟಾ ಮೋಟಾರ್ಸ್ ಅಡಳಿತ ಮಂಡಳಿಗೆ ಸೇರ್ಪಡೆಗೊಳಿಸಲಾಗುವುದು ಎಂದು ಟಾಟಾ ಮೋಟಾರ್ಸ್ ಮೂಲಗಳು ತಿಳಿಸಿವೆ.
ಟೆಟ್ಲಿ ಗ್ರೂಪ್‌ನ ಪೀಟರ್ ಅನ್ಸ್‌ವರ್ಥ್ ಮತ್ತು ತಾಜ್ ಚೈನ್ ಸಂಚಾಲಿತ ಇಂಡಿಯನ್ ಹೋಟೆಲ್ಸ್ ಕಂಪೆನಿಯ ರೇಮಂಡ್ ಬಿಕ್ಸನ್ ನಂತರ, ಸುಮಾರು 71 ಬಿಲಿಯನ್ ಡಾಲರ್ ವಹಿವಾಟು ನಡೆಸುವ ಟಾಟಾ ಸಂಸ್ಥೆಗೆ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಯಾಗಿ ಫೊಸ್ಟರ್ ಮೂರನೇಯವರಾಗಿದ್ದಾರೆ.
ಫೊಸ್ಟರ್ ನೇಮಕದಿಂದ ಟಾಟಾ ಮೋಟಾರ್ಸ್ ಕಂಪೆನಿ, ಪರಿಪೂರ್ಣ ಪ್ರಮಾಣದಲ್ಲಿ ಅಂತಾರಾಷ್ಟ್ರೀಯ ಕಂಪೆನಿಯಾಗಿ ಹೊರಹೊಮ್ಮುವಲ್ಲಿ ಸಹಕಾರಿಯಾಗುತ್ತದೆ ಎಂದು ಟಾಟಾ ಗ್ರೂಪ್ ಮುಖ್ಯಸ್ಥ ರತನ್ ಟಾಟಾ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.