ವೇಗದ ಡಟಾ ಸೇವೆಗಳು ಲಭ್ಯವಾಗುವ 3ಜಿ ತರಂಗಾಂತಗಳ ಹರಾಜಿನ ನಿಗದಿತ ಸಮಯವನ್ನು ಘೋಷಿಸಲು ವಿತ್ತ ಹಾಗೂ ಕಾನೂನು ಸಚಿವಾಲಯಗಳ ನಿರ್ದೇಶನಕ್ಕಾಗಿ ನಿರೀಕ್ಷಿಸುತ್ತಿರುವುದಾಗಿ ಟೆಲಿಕಾಂ ಖಾತೆ ಸಚಿವ ಎ.ರಾಜಾ ತಿಳಿಸಿದ್ದಾರೆ.
3ಜಿ ತರಂಗಾಂತರ ಹರಾಜು ಕುರಿತಂತೆ ಸಂಪೂರ್ಣವಾಗಿ ಸ್ಪಷ್ಟವಾಗಿಲ್ಲ. ವಿತ್ತ ಹಾಗೂ ಕಾನೂನು ಸಚಿವಾಲಯಗಳ ನಿರ್ದೇಶನದ ನಂತರ ಹರಾಜು ನಡೆಯುವ ಕುರಿತಂತೆ ನಿಖರವಾಗಿ ಹೇಳಿಕೆ ನೀಡಲು ಸಾಧ್ಯ ಎಂದು ಸಚಿವ ರಾಜಾ ಸ್ಪಷ್ಟಪಡಿಸಿದ್ದಾರೆ.
ಒಂದು ವೇಳೆ 3ಜಿ ತರಂಗಾಂತರ ಹರಾಜು ಪ್ರಸಕ್ತ ಆರ್ಥಿಕ ವರ್ಷದ ನಡೆಯಲಿ ಅಥವಾ ಮುಂದಿನ ಆರ್ಥಿಕ ವರ್ಷದಲ್ಲಿ ನಡೆಯಲಿ, ಗರಿಷ್ಠ ಆದಾಯವನ್ನು ಪರಿಗಣಿಸಿ ಡಾಟ್ ಮತ್ತು ವಿತ್ತಸಚಿವಾಲಯ ನಿರ್ಧಾರ ತೆಗೆದುಕೊಳ್ಳುತ್ತವೆ ಎಂದು ತಿಳಿಸಿದ್ದಾರೆ.
ಸಂಪುಟದ ಕಾರ್ಯದರ್ಶಿ ಹಾಗೂ ವಿತ್ತಸಚಿವಾಲಯಗಳ ಕಾರ್ಯದರ್ಶಿಗಳು ಮತ್ತು ಟೆಲಿಕಾಂ ಸಚಿವಾಲಯಗಳು 3ಜಿ ತಂರಂಗಾಂತರ ಹರಾಜು ದಿನಾಂಕವನ್ನು ಪ್ರಕಟಿಸಲಿವೆ ಎಂದು ವಿತ್ತಸಚಿವಾಲಯ ಕಾರ್ಯದರ್ಶಿ ಅಶೋಕ್ ಚಾವ್ಲಾ ಹೇಳಿದ್ದಾರೆ.
ಪ್ರಸಕ್ತ ಆರ್ಥಿಕ ವರ್ಷದಲ್ಲಿ 3ಜಿ ತರಂಗಾಂತರಗಳ ಹರಾಜಿನಿಂದ 35 ಸಾವಿರ ಕೋಟಿ ರೂಪಾಯಿಗಳ ಸಂಗ್ರಹವಾಗಲಿದೆ ಎಂದು ವಿತ್ತ ಸಚಿವ ಪ್ರಣಬ್ ಮುಖರ್ಜಿ ನೇತೃತ್ವದ ಸಭೆಯಲ್ಲಿ ವಿವರ ನೀಡಲಾಗಿತ್ತು.