ನೂತನ ಹೊರಸೂಸುವಿಕೆ ನೀತಿಗಳಿಂದಾಗಿ, ವಾಣಿಜ್ಯ ವಾಹನಗಳ ಮಾರಾಟ ದರದಲ್ಲಿ ಶೇ.2ರಷ್ಟು ಹೆಚ್ಚಳ ಮಾಡಲು ನಿರ್ಧರಿಸಿದೆ. ಹಾಗೂ ರಕ್ಷಣಾ ಇಲಾಖೆಯ ಸಾದಾ ಬುಲೆಟ್‌ಪ್ರೂಫ್ ವಾಹನಗಳಿಗಾಗಿ 300 ಕೋಟಿ ರೂಪಾಯಿಗಳ ಬಿಡ್ ಸಲ್ಲಿಸಲಾಗಿದೆ ಎಂದು ಟಾಟಾಮೋಟಾರ್ಸ್ ಮೂಲಗಳು ತಿಳಿಸಿವೆ.
ನೂತನ ಹೊರಸೂಸುವಿಕೆ ನೀತಿಗಳಿಂದಾಗಿ ನೂತನ ತಂತ್ರಜ್ಞಾನಗಳ ಅಗತ್ಯವಿರುವ ಹಿನ್ನೆಲೆಯಲ್ಲಿ ವಾಣಿಜ್ಯ ವಾಹನಗಳ ದರಗಳಲ್ಲಿ ಶೇ.1ರಿಂದ ಶೇ.2ರಷ್ಟು ಹೆಚ್ಚಳ ಮಾಡಲು ನಿರ್ಧರಿಸಿದೆ ಎಂದು ಟಾಟಾ ಮೋಟಾರ್ಸ್(ವಾಣಿಜ್ಯ ವಾಹನ)ಉಪಾಧ್ಯಕ್ಷ ರವಿ ಪಿಶಾರೋಡಿ ತಿಳಿಸಿದ್ದಾರೆ.
ಭಾರತ ನಾಲ್ಕನೇ ಹೊರಸೂಸುವಿಕೆ ನೀತಿಗಳು ದೇಶದ ಪ್ರಮುಖ 13ನಗರಗಳಲ್ಲಿ ಏಪ್ರಿಲ್‌ನಿಂದ ಜಾರಿಗೆ ಬರಲಿರುವುದರಿಂದ, ವಾಹನೋದ್ಯಮ ಸಂಸ್ಥೆಗಳು ಇಂಜಿನ್ ಮತ್ತು ಹಬೆಯನ್ನು ಹೊರಹಾಕುವ ಯಂತ್ರಗಳನ್ನು ಬದಲಿಸುವುದು ಅಗತ್ಯವಾಗಿದೆ.
ಪ್ರಯಾಣಿಕ ವಾಹನಗಳ ದರಗಳಲ್ಲಿ ಏರಿಕೆಯಾಗಲಿದೆ. ಆದರೆ ದರ ಏರಿಕೆ ಬಗ್ಗೆ ಪ್ರಸ್ತುತ ಹೆಚ್ಚಿಗೆ ಹೇಳಲು ಸಾಧ್ಯವಿಲ್ಲ ಎಂದು ಟಾಟಾ ಮೋಟಾರ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಪಿ.ಎಂ.ತೆಲಂಗ್ ಹೇಳಿದ್ದಾರೆ.
ಭಾರತದ ಸೇನೆಗೆ ಅಗತ್ಯವಿರುವ 1ಸಾವಿರ ಸಾದಾ ಬುಲೆಟ್ ಪ್ರೂಫ್ ವಾಹನಗಳನ್ನು ಪೂರೈಸಲು ಟಾಟಾಮೋಟಾರ್ಸ್ ಸಂಸ್ಥೆ ಬಿಡ್ ಸಲ್ಲಿಸಿದೆ ಎಂದು ಟಾಟಾಮೋಟಾರ್ಸ್ ಉಪಾಧ್ಯಕ್ಷ ರವಿಕಾಂತ್ ತಿಳಿಸಿದ್ದಾರೆ.