ಕೈಗಾರಿಕೋದ್ಯಮದ ಚೇತರಿಕೆಯಿಂದಾಗಿ ಭಾರತದ ಆರ್ಥಿಕತೆ ಪ್ರಸಕ್ತ ಆರ್ಥಿಕ ಸಾಲಿನಲ್ಲಿ ಶೇ.7.5ಕ್ಕೆ ತಲುಪಲಿದ್ದು, ಮುಂದಿನ ಆರ್ಥಿಕ ಸಾಲಿನಲ್ಲಿ ಶೇ.8.5ಕ್ಕೆ ತಲುಪಲಿದೆ ಎಂದು ಕೇಂದ್ರ ವಿತ್ತಖಾತೆ ಸಚಿವ ಪ್ರಣಬ್ ಮುಖರ್ಜಿ ಹೇಳಿದ್ದಾರೆ.
ಮೂರನೇ ತ್ರೈಮಾಸಿಕ ಅವಧಿಯ ಕೈಗಾರಿಕೆ ಅಭಿವೃದ್ಧಿ ದರದಲ್ಲಿ ಭಾರಿ ಪ್ರಮಾಣದಲ್ಲಿ ಚೇತರಿಕೆ ಕಂಡಿರುವುದರಿಂದ ಜಿಡಿಪಿ ದರ ಶೇ.7.5ರಷ್ಟಾಗುವ ನಿರೀಕ್ಷೆಯಿದ್ದು,ಮುಂದಿನ ಆರ್ಥಿಕ ಸಾಲಿನಲ್ಲಿ ಶೇ.8.5ರಷ್ಟಾಗಲಿದೆ ಸಚಿವ ಮುಖರ್ಜಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಉತ್ಪಾದನಾ ಕ್ಷೇತ್ರ ವಿಶೇಷವಾಗಿ ಗೃಹಪೋಕರಣಗಳ ವಸ್ತುಗಳು ಭಾರಿ ಬೇಡಿಕೆಯ ಹಿನ್ನೆಲೆಯಲ್ಲಿ, ಡಿಸೆಂಬರ್ ತಿಂಗಳ ಅವಧಿಯಲ್ಲಿ ಕೈಗಾರಿಕೆ ಅಭಿವೃದ್ಧಿ ದರ ಶೇ.16.8ಕ್ಕೆ ಏರಿಕೆಯಾಗಿ 16 ವರ್ಷಗಳಷ್ಟು ಏರಿಕೆ ಕಂಡಿದೆ.
ಜನೆವರಿ ತಿಂಗಳ ಅವಧಿಯಲ್ಲಿ ಕೂಡಾ ಕೈಗಾರಿಕೆ ವೃದ್ಧಿ ದರ ಶೇ ಚೇತರಿಕೆಯಾಗಲಿದ್ದು, ಶೇ.13.5-14.5ರಷ್ಟು ತಲುಪುವ ನಿರೀಕ್ಷೆಯಿದೆ ಎಂದು ಅಧ್ಯಯನ ಸಮೀಕ್ಷಾ ಸಂಸ್ಥೆ ಹೇಳಿಕೆ ನೀಡಿದೆ.
ಕೈಗಾರಿಕೋದ್ಯಮದ ಚೇತರಿಕೆಯಿಂದಾಗಿ ಮೂರನೇ ತ್ರೈಮಾಸಿಕ ಅವಧಿಯಲ್ಲಿ ಆರ್ಥಿಕ ವೃದ್ಧಿ ದರ ಶೇ.6.8ರಿಂದ ಶೇ.7.3ಕ್ಕೆ ತಲುಪುವ ನಿರೀಕ್ಷೆ ನಿಜವಾಗಿದೆ ಎಂದು ಡನ್ ಆಂಡ್ ಬ್ರಾಡ್‌ಸ್ಟ್ರೀಟ್ ವರದಿಯಲ್ಲಿ ಪ್ರಕಟಿಸಿದೆ.