ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಅಹಾರ ದರಗಳು ಶೀಘ್ರದಲ್ಲಿ ಇಳಿಕೆ:ಮುಖರ್ಜಿ (Inflation | Food prices | Price rise | Pranab Mukherjee)
Bookmark and Share Feedback Print
 
ಹಣದುಬ್ಬರ ಏರಿಕೆ ಅಭಿವೃದ್ಧಿಗೆ ಅಡ್ಡಿಯಾಗಿದ್ದರೂ ಮಾರುಕಟ್ಟೆಗೆ ಬೆಳೆ ಬಂದ ನಂತರ ದರ ಏರಿಕೆಗೆ ಕಾರಣವಾದ ಅಹಾರ ದರಗಳಲ್ಲಿ ಇಳಿಕೆಯಾಗಲಿದೆ ಎಂದು ಸರಕಾರಿ ಮೂಲಗಳು ತಿಳಿಸಿವೆ.

ಹಣದುಬ್ಬರ ಏರಿಕೆ ಕಳವಳದ ಸಂಗತಿಯಾಗಿದೆ ಎನ್ನುವುದರ ಬಗ್ಗೆ ಸಂಶಯವಿಲ್ಲ. ಸಗಟು ಸೂಚ್ಯಂಕ ದರ ಶೇ.8.5ಕ್ಕೆ ಏರಿಕೆ ಕಂಡಿರುವುದು ಆತಂಕ ಮೂಡಿಸಿದೆ. ಆದರೆ ಮುಂಬರುವ ಕೆಲ ತಿಂಗಳುಗಳಲ್ಲಿ ಹಣದುಬ್ಬರ ಕುಸಿತವಾಗಲಿದೆ ಎಂದು ಕೇಂದ್ರ ವಿತ್ತಖಾತೆ ಸಚಿವ ಪ್ರಣಬ್ ಮುಖರ್ಜಿ ತಿಳಿಸಿದ್ದಾರೆ.

ಅಹಾರ ದರಗಳ ಏರಿಕೆಯಿಂದಾಗಿ ಜನೆವರಿ ತಿಂಗಳಿಗೆ ಅಂತ್ಯಗೊಂಡಂತೆ ಸಗಟು ಸೂಚ್ಯಂಕ ದರದ ಹಣದುಬ್ಬರ ಶೇ.8.56ಕ್ಕೆ ತಲುಪಿತ್ತು.ಜನೆವರಿ 30ಕ್ಕೆ ಅಂತ್ಯಗೊಂಡಂತೆ ಅಹಾರ ಹಣದುಬ್ಬರ ದರ ಶೇ.18ಕ್ಕೆ ಏರಿಕೆ ಕಂಡಿದೆ.

ಅಹಾರ ದರಗಳ ಏರಿಕೆ ನಿಯಂತ್ರಣಕ್ಕಾಗಿ ಅಹಾರಧಾನ್ಯಗಳ ಸರಬರಾಜು ವ್ಯವಸ್ಥೆಯನ್ನು ಸುಲಭಗೊಳಿಸಲು ಕಠಿಣ ಕ್ರಮಗಳನ್ನು ತೆಗೆದುಕೊಂಡಿದ್ದು, ಮುಂಬರುವ ಕೆಲ ತಿಂಗಳುಗಳಲ್ಲಿ ಅಹಾರ ದರಗಳಲ್ಲಿ ಇಳಿಕೆಯಾಗಲಿದೆ ಎಂದು ಮುಖರ್ಜಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ