ನ್ಯೂಯಾರ್ಕ್ , ಬುಧವಾರ, 17 ಫೆಬ್ರವರಿ 2010( 17:46 IST )
ಕೈಗಾರಿಕೋದ್ಯಮ ಹಾಗೂ ಆಭರಣಗಳ ಬೇಡಿಕೆ ಕುಸಿತದಿಂದಾಗಿ, ಕಳೆದ ವರ್ಷ ಚಿನ್ನದ ಬೇಡಿಕೆಯಲ್ಲಿ ಶೇ.11ರಷ್ಟು ಕುಸಿತವಾಗಿದೆ.ಆದರೆ ಪ್ರಸಕ್ತ ವರ್ಷದ ಅವಧಿಯಲ್ಲಿ ಚಿನ್ನದ ಬೇಡಿಕೆಯಲ್ಲಿ ಏರಿಕೆಯಾಗಲಿದೆ ಎಂದು ಹೂಡಿಕೆದಾರರು ಭಾವಿಸಿದ್ದಾರೆ ಎಂದು ವರ್ಲ್ಡ್ ಗೋಲ್ಡ್ ಕೌನ್ಸಿಲ್ ಹೇಳಿಕೆ ನೀಡಿದೆ.
ಜಾಗತಿಕ ಆರ್ಥಿಕ ಕುಸಿತದಿಂದಾಗಿ ಕರೆನ್ಸಿ ಮೌಲ್ಯದಲ್ಲಿ ಕುಸಿತ ಹಾಗೂ ದೀರ್ಘಾವಧಿಯ ಹಣದುಬ್ಬರದ ಆತಂಕದಿಂದಾಗಿ, ಪರ್ಯಾಯ ಸುರಕ್ಷಿತ ಹೂಡಿಕೆಯಾದ ಚಿನ್ನದ ಖರೀದಿಯಿಂದಾಗಿ ಹೂಡಿಕೆದಾರರು ಶೇ.35ರಷ್ಟು ಲಾಭವನ್ನು ಪಡೆದಿದ್ದು, ಮೂರು ದಶಕಗಳಲ್ಲಿ ಗರಿಷ್ಠವಾಗಿದೆ.
ಕಳೆದ ವರ್ಷದ ಮೂರನೇ ತ್ರೈಮಾಸಿಕ ಅವಧಿಯ ಜಾಗತಿಕ ಬೇಡಿಕೆಯಲ್ಲಿ, ಚಿನ್ನ ಶೇ.24ರಷ್ಟು ಕುಸಿತವಾಗಿ 819.7 ಟನ್‌ಗಳಿಗೆ ತಲುಪಿತ್ತು. ಆದರೆ ಪ್ರಸಕ್ತ ವರ್ಷದ ಕಳೆದ ಎರಡು ತ್ರೈಮಾಸಿಕ ಅವಧಿಗೆ ಹೋಲಿಸಿದಲ್ಲಿ ಮೂರನೇ ತ್ರೈಮಾಸಿಕದಲ್ಲಿ ಚೇತರಿಸಿಕೊಂಡಿದೆ.
ಚಿನ್ನ ಖರೀದಿಸುವ ಗ್ರಾಹಕರ ಸಂಖ್ಯೆಗಳಲ್ಲಿ ಏರಿಕೆಯಾಗುತ್ತಿರುವುದರಿಂದ, ಮುಂಬರುವ ದಿನಗಳಲ್ಲಿ ಚಿನ್ನದ ಬೇಡಿಕೆಯಲ್ಲಿ ಹೆಚ್ಚಳವಾಗುವ ನಿರೀಕ್ಷೆಯಿದೆ ಎಂದು ವರ್ಲ್ಡ್ ಗೋಲ್ಡ್ ಕೌನ್ಸಿಲ್‌ನ ವ್ಯವಸ್ಥಾಪಕ ನಿರ್ದೇಶಕರಾದ ಜಾರ್ಜ್ ಮಿಲ್ಲಿಂಗ್ ಹೇಳಿದ್ದಾರೆ.