ಸರಕಾರಿ ಸ್ವಾಮ್ಯದ ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್ (ಬಿಎಚ್‌ಇಎಲ್)ಸಂಸ್ಥೆ, ದೇಶಿಯ ವಿದ್ಯುತ್ ಉಪಕರಣಗಳ ಬೇಡಿಕೆಯನ್ನು ಪೂರೈಸಲು ಮುಂದಿನ ಎರಡು ವರ್ಷಗಳೊಳಗಾಗಿ 8 ಸಾವಿರ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲಾಗುವುದು ಎಂದು ಕಂಪೆನಿಯ ಮೂಲಗಳು ತಿಳಿಸಿವೆ.
ವಾರ್ಷಿಕವಾಗಿ 4 ಸಾವಿರ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲು ನಿರ್ಧರಿಸಲಾಗಿದೆ.ಕಳೆದ ಎರಡು ವರ್ಷಗಳಲ್ಲಿ ನೇಮಕ ಮಾಡಿಕೊಂಡಂತೆ ಪ್ರಸಕ್ತ ವರ್ಷದಲ್ಲಿ ಕೂಡಾ ನೇಮಕ ಮಾಡಿಕೊಳ್ಳಲಾಗುವುದು ಎಂದು ಬಿಎಚ್‌ಇಎಲ್ ವ್ಯವಸ್ಥಾಪಕ ನಿರ್ದೇಶಕ ಬಿ.ಪಿ ರಾವ್ ತಿಳಿಸಿದ್ದಾರೆ.
2007ರಿಂದ 2012ರವರೆಗೆ ಬಿಎಚ್‌ಇಎಲ್ ಸಂಸ್ಥೆ ಐದು ವರ್ಷಗಳ ಅವಧಿಯಲ್ಲಿ ಸುಮಾರು 20 ಸಾವಿರ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲು ನಿರ್ಧರಿಸಿದೆ.ಈಗಾಗಲೇ ಅರ್ಧದಷ್ಟು ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.
ಮುಂಬರುವ ಎರಡು ವರ್ಷಗಳಲ್ಲಿ 8 ಸಾವಿರ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲಾಗುವುದು ಎಂದು ಬಿಎಚ್‌ಇಎಲ್ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಸಕ್ತ ವರ್ಷದ ಅವಧಿಯ ಮುಕ್ತಾಯಕ್ಕೆ 12 ಸಾವಿರ ಉದ್ಯೋಗಿಗಳು ನಿವೃತ್ತಿಯನ್ನು ಹೊಂದಲಿರುವುದರಿಂದ, ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.
ಕಂಪೆನಿಯಲ್ಲಿ 48 ಸಾವಿರ ಉದ್ಯೋಗಿಗಳು ಕಾರ್ಯನಿರ್ವಹಿಸುತ್ತಿದ್ದು,ಪ್ರಸ್ತುತ 10 ಸಾವಿರ ಮೆಗಾವ್ಯಾಟ್ ವಿದ್ಯುತ ಉತ್ಪಾದನೆಯಿಂದ ಮುಂಬರುವ ಐದು ವರ್ಷಗಳಲ್ಲಿ 20,ಸಾವಿರ ಮೆಗಾ ವ್ಯಾಟ್‌ಗಳಿಗೆ ಹೆಚ್ಚಿಸಲು ಕಂಪೆನಿ ನಿರ್ಧರಿಸಿದೆ.