ಸಾಗರೋತ್ತರ ಮಾರುಕಟ್ಟೆಗಳಲ್ಲಿ ಡಾಲರ್ ಚೇತರಿಕೆ ಹಾಗೂ ವಿದೇಶಿ ಬಂಡವಾಳದ ಹೊರಹರಿವು ಹಚ್ಚಳವಾದ ಹಿನ್ನೆಲೆಯಲ್ಲಿ, ಡಾಲರ್ ಎದುರಿಗೆ ರೂಪಾಯಿ ಮೌಲ್ಯದಲ್ಲಿ 12ಪೈಸೆ ಕುಸಿತ ಕಂಡಿದೆ.
ವಿದೇಶಿ ವಿನಿಮಯ ಮಾರುಕಟ್ಟೆಯ ಹಿಂದಿನ ದಿನದ ವಹಿವಾಟಿನ ಮುಕ್ತಾಯಕ್ಕೆ, ಡಾಲರ್ ಎದುರಿಗೆ 11 ಪೈಸೆ ಏರಿಕೆ ಕಂಡು 46.10/11 ರೂಪಾಯಿಗಳಿಗೆ ಮುಕ್ತಾಯವಾಗಿತ್ತು. ಆದರೆ ಇಂದಿನ ಆರಂಭಿಕ ವಹಿವಾಟಿನಲ್ಲಿ, ಡಾಲರ್ ಎದುರಿಗೆ 12 ಪೈಸೆ ಕುಸಿತ ಕಂಡು 46.22 ರೂಪಾಯಿಗಳಿಗೆ ತಲುಪಿದೆ.
ಸಾಗರೋತ್ತರ ಮಾರುಕಟ್ಟೆಗಳಲ್ಲಿ ಡಾಲರ್ ಚೇತರಿಕೆ ಮತ್ತು ಶೇರುಪೇಟೆಗಳ ದುರ್ಬಲ ವಹಿವಾಟಿನಿಂದಾಗಿ, ರೂಪಾಯಿ ಮೌಲ್ಯ ಕುಸಿತಕ್ಕೆ ಕಾರಣವಾಗಿದೆ ಎಂದು ಮಾರುಕಟ್ಟೆಯ ಡೀಲರ್‌ಗಳು ತಿಳಿಸಿದ್ದಾರೆ.
ಏತನ್ಮಧ್ಯೆ, ಮುಂಬೈ ಶೇರುಪೇಟೆಯ ಸೂಚ್ಯಂಕ ಇಂದಿನ ಆರಂಭಿಕ ವಹಿವಾಟಿನಲ್ಲಿ 72.54 ಪಾಯಿಂಟ್‌ಗಳ ಕುಸಿತ ಕಂಡು 16,356.37 ಅಂಕಗಳಿಗೆ ತಲುಪಿದೆ.