ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಪ್ರಧಾನಿಯ ನಿಯೋಗದಲ್ಲಿ ಮುಕೇಶ್, ಪ್ರೇಮ್‌ಜಿ (Manmohan Singh | Saudi Arabia | Mukesh | Premji | Business delegation)
Bookmark and Share Feedback Print
 
ಮುಂದಿನ ವಾರ ಸೌದಿ ಅರೇಬಿಯಾಗೆ ತೆರಳುತ್ತಿರುವ ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದ ಔದ್ಯೋಗಿಕ ನಿಯೋಗದಲ್ಲಿ, ಖಾಸಗಿ ಕಂಪೆನಿಗಳ ಮುಖ್ಯಸ್ಥರಾದ ರಿಲಯನ್ಸ್‌ನ ಮುಕೇಶ್ ಅಂಬಾನಿ, ಎಸ್ಸಾರ್ ಕಂಪೆನಿಯ ಶಶಿ ರುಯಾ ಮತ್ತು ಮಾಹಿತಿ ತಂತ್ರಜ್ಞಾನ ಕ್ಷೇತ್ರದ ದಿಗ್ಗಜರಾದ ಅಜೀಂ ಪ್ರೇಮ್‌ಜಿ ಮತ್ತು ಎಸ್.ರಾಮಾದೊರೈ ತೆರಳಲಿದ್ದಾರೆ.

ತೈಲೋದ್ಯಮ ಕ್ಷೇತ್ರದಲ್ಲಿ ಒಪೆಕ್‌ನ ಪ್ರಮುಖ ರಾಷ್ಟ್ರವಾದ ಸೌದಿ ಅರೇಬಿಯಾ, ಭಾರತಕ್ಕೆ ಬೃಹತ್ ಕಚ್ಚಾ ತೈಲವನ್ನು ಸರಬರಾಜು ಮಾಡುವಲ್ಲಿ ಅಗ್ರಸ್ಥಾನದಲ್ಲಿದೆ. ಇಂಡಿಯನ್ ಆಯಿಲ್, ಭಾರತ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಸಂಸ್ಥೆಗಳ ಮುಖ್ಯಸ್ಥರು ನಿಯೋಗದಲ್ಲಿದ್ದಾರೆ.

ಪ್ರಧಾನಿ ಮನಮೋಹನ್ ಸಿಂಗ್ ಫೆಬ್ರವರಿ 27 ರಿಂದ ಎರಡು ದಿನಗಳ ಕಾಲ ಪ್ರವಾಸವನ್ನು ಹಮ್ಮಿಕೊಂಡಿದ್ದು, ತೈಲ ಸಂಪತ್ಭರಿತ ರಾಷ್ಟ್ರ ಸೌದಿ ಅರೇಬಿಯಾದೊಂದಿಗೆ ವಹಿವಾಟುಗಳನ್ನು ಹೆಚ್ಚಿಸಲು ಸಹಾಯಕವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಧಾನಿ ಮನಮೋಹನ್ ಸಿಂಗ್ ಅವರ ಭೇಟಿಯ ಸಂದರ್ಭದಲ್ಲಿ, ಸುಮಾರು 750 ಮಿಲಿಯನ್ ಡಾಲರ್ ಜಂಟಿ ಹೂಡಿಕೆಯ ಒಪ್ಪಂದಕ್ಕೆ ಸಹಿ ಹಾಕಲಾಗುತ್ತದೆ. ಸೌದಿ ಅರೇಬಿಯಾ 500 ಮಿಲಿಯನ್ ಡಾಲರ್ ಹೂಡಿಕೆ ಮಾಡಲಿದೆ ಎಂದು ನಿಯೋಗದಲ್ಲಿರುವ ಮೂಲಗಳು ತಿಳಿಸಿವೆ.
ಸಂಬಂಧಿತ ಮಾಹಿತಿ ಹುಡುಕಿ