ಆಲೂಗಡ್ಡೆ ಮತ್ತು ಈರುಳ್ಳಿ ದರಗಳ ಏರಿಕೆಯಿಂದಾಗಿ, ಫೆಬ್ರವರಿ 6ಕ್ಕೆ ವಾರಂತ್ಯಗೊಂಡಂತೆ ಅಹಾರ ಹಣದುಬ್ಬರ ದರ ಷೇ.17.97ಕ್ಕೆ ಏರಿಕೆಯಾಗಿದೆ.
ಸಗಟು ಸೂಚ್ಯಂಕ ದರ ಆಧಾರಿತ ಅಹಾರ ಹಣದುಬ್ಬರ ದರ ನಿರಂತರ ನಾಲ್ಕನೇ ವಾರದಲ್ಲೂ ಏರಿಕೆ ಕಂಡಿದೆ. ಕಳೆದ ವಾರದ ಅವಧಿಯಲ್ಲಿ ಅಹಾರ ಹಣದುಬ್ಬರ ದರ ಶೇ.17.94ಕ್ಕೆ ತಲುಪಿತ್ತು.
ಕಳೆದ ವರ್ಷದ ಫೆಬ್ರವರಿ ತಿಂಗಳಿಗೆ ಹೋಲಿಸಿದಲ್ಲಿ ಆಲೂಗಡ್ಡೆ ದರ ಶೇ.57.67ರಷ್ಟು ಏರಿಕೆ ಕಂಡಿದೆ.ಏತನ್ಮಧ್ಯೆ, ಈರುಳ್ಳಿ ದರದಲ್ಲಿ ಶೇ.29.92ರಷ್ಟು ಏರಿಕೆ ಕಂಡಿದೆ.
ಅಹಾರ ಮತ್ತು ಅಹಾರೇತರ ಪ್ರಾಥಮಿಕ ವಸ್ತುಗಳ ಹಣದುಬ್ಬರ ದರ ಶೇ.16.23ರಷ್ಟು ಏರಿಕೆ ಕಂಡಿದೆ. ಕಳೆದ ವಾರದ ಅವಧಿಯಲ್ಲಿ ಹಣದುಬ್ಬರ ದರ ಶೇ.15.75ಕ್ಕೆ ತಲುಪಿತ್ತು.
ಪೌಲ್ಟ್ರಿ ಚಿಕನ್ ದರದಲ್ಲಿ ಶೇ.3ರಷ್ಟು ಏರಿಕೆಯಾಗಿದ್ದರಿಂದ, ಅಹಾರ ವಸ್ತುಗಳ ದರ ಸೂಚ್ಯಂಕ, ಶೇ.0.1ರಷ್ಟು ಏರಿಕೆ ಕಂಡಿದೆ.ಏತನ್ಮಧ್ಯೆ, ಸಾಗರೋತ್ಪನ್ನ ಅಹಾರ ವಸ್ತುಗಳ ದರಗಳಲ್ಲಿ ಶೇ.2ರಷ್ಟು ಏರಿಕೆಯಾಗಿದೆ. ಬಾರ್ಲಿ ಮತ್ತು ಗೋಧಿ ದರಗಳಲ್ಲಿ ಶೇ.1ರಷ್ಟು ಏರಿಕೆಯಾಗಿದೆ.
ಹಣದುಬ್ಬರ ಏರಿಕೆ ಕಳವಳಕ್ಕೆ ಕಾರಣವಾಗಿದ್ದರೂ ಮುಂಬರುವ ಕೆಲ ತಿಂಗಳುಗಳಲ್ಲಿ ಹಣದುಬ್ಬರದಲ್ಲಿ ಇಳಿಕೆಯಾಗಲಿದೆ ಎಂದು ವಿತ್ತಸಚಿವ ಪ್ರಣಬ್ ಮುಖರ್ಜಿ ನಿನ್ನೆ ಹೇಳಿಕೆ ನೀಡಿದ್ದರು.