ವಾಷಿಂಗ್ಟನ್, ಗುರುವಾರ, 18 ಫೆಬ್ರವರಿ 2010( 15:21 IST )
ಸಾಲ ವಿತರಣೆಗಾಗಿ ಸಂಪನ್ಮೂಲಗಳನ್ನು ಹೆಚ್ಚಿಸಲು ಚಿನ್ನದ ಮಾರಾಟಕ್ಕಾಗಿ ನೀಡಿದ ಅನುಮತಿಯನ್ವಯ, ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ ಆಧೀನದಲ್ಲಿರುವ 191.3 ಟನ್ ಚಿನ್ನವನ್ನು ಶೀಘ್ರದಲ್ಲಿ ಮಾರಾಟ ಮಾಡಲು ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.
ಜಾಗತಿಕ ಚಿನ್ನದ ಮಾರುಕಟ್ಟೆಯಲ್ಲಿ ಚಿನ್ನದ ಕೊರತೆಯನ್ನು ನೀಗಿಸಲು ಮಾರಾಟ ಮಾಡಲು ನಿರ್ಧರಿಸಲಾಗಿದೆ. ಚಿನ್ನವನ್ನು ಹಂತ ಹಂತದಲ್ಲಿ ಮಾರಾಟ ಮಾಡಲಾಗುವುದು.ಬ್ಯಾಂಕ್‌ಗಳು ಐಎಂಎಫ್‌ನಿಂದ ನೇರವಾಗಿ ಚಿನ್ನವನ್ನು ಖರೀದಿಸಬಹುದಾಗಿದೆ ಎಂದು ಐಎಂಎಫ್ ತಿಳಿಸಿದೆ.
ಬಡರಾಷ್ಟ್ರಗಳಿಗೆ ಕಡಿಮೆ ದರದಲ್ಲಿ ಸಾಲ ನೀಡಲು ಹಾಗೂ ಸಂಪನ್ಮೂಲಗಳನ್ನು ಹೆಚ್ಚಿಸಲು ಐಎಂಎಫ್ ಸಂಸ್ಥೆ, ಕಳೆದ ವರ್ಷ 403.3ಟನ್ ಚಿನ್ನವನ್ನು ಮಾರಾಟ ಮಾಡುವದಾಗಿ ಘೋಷಿಸಿತ್ತು.
ಇಲ್ಲಿಯವರೆಗೆ ಮೊದಲ ಬಂದವರಿಗೆ ಮೊದಲ ಆದ್ಯತೆಯ ಅಂಗವಾಗಿ ಕೇವಲ ರಿಸರ್ವ್ ಬ್ಯಾಂಕ್‌ಗಳಿಗೆ ಮಾತ್ರ ಚಿನ್ನವನ್ನು ಮಾರಾಟ ಮಾಡಲಾಗುತ್ತಿತ್ತು. ಚಿನ್ನ ಖರೀದಿಯಲ್ಲಿ ವಿಶ್ವದಲ್ಲಿ ಅಗ್ರಸ್ಥಾನದಲ್ಲಿರುವ ಭಾರತ,ಮಾರಿಷಿಯಸ್ ಮತ್ತು ಶ್ರೀಲಂಕಾ ರಾಷ್ಟ್ರಗಳು 212 ಟನ್ ಚಿನ್ನವನ್ನು ಐಎಂಎಫ್‌ನಿಂದ ಖರೀದಿಸಿವೆ.