ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಕೇಂದ್ರದಿಂದ ಏರಿಂಡಿಯಾಗೆ 800 ಕೋಟಿ ರೂ.ಹೂಡಿಕೆ (Air India | Government | Equity infusion | loss)
Bookmark and Share Feedback Print
 
ಆರ್ಥಿಕ ನಷ್ಟವನ್ನು ಎದುರಿಸುತ್ತಿರುವ ಏರ್‌ಇಂಡಿಯಾ ವಿಮಾನಯಾನ ಸಂಸ್ಥೆಗೆ ಪುನಶ್ಚೇತನ ನೀಡಲು 800 ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡಲು ಸರಕಾರ ನಿರ್ಧರಿಸಿದೆ ಎಂದು ಸರಕಾರದ ವಕ್ತಾರರು ಹೇಳಿದ್ದಾರೆ.

ಕಳೆದ ಆರ್ಥಿಕ ವರ್ಷದಲ್ಲಿ ಏರ್‌ಇಂಡಿಯಾ ಸಂಸ್ಥೆ,7200 ಕೋಟಿ ರೂಪಾಯಿ ನಿವ್ವಳ ನಷ್ಟವನ್ನು ಅನುಭವಿಸಿದೆ ಎಂದು ಏರ್‌ಇಂಡಿಯಾ ಮೂಲಗಳು ತಿಳಿಸಿವೆ.

ಮೊದಲ ಹಂತದ ಬೇಲೌಟ್ ಪ್ಯಾಕೇಜ್ ಪಡೆಯುವ ಮುನ್ನ, ನಷ್ಟವನ್ನುತಡೆಯುವ ನಿಟ್ಟಿನಲ್ಲಿ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವಂತೆ ಕೇಂದ್ರ ಸರಕಾರ ಏರ್‌ಇಂಡಿಯಾ ಸಂಸ್ಥೆಗೆ ಆದೇಶಿಸಿತ್ತು.

ಪ್ರಸ್ತುತ ಆರ್ಥಿಕ ಸಾಲಿನ ಅಂತ್ಯಕ್ಕೆ ಕನಿಷ್ಠ 2ಸಾವಿರ ಕೋಟಿ ರೂಪಾಯಿಗಳ ನಷ್ಟವನ್ನು ತಡೆಯುವಂತೆ ಸಲಹೆ ನೀಡಿತ್ತು. ಆದರೆ ಏರ್‌ಇಂಡಿಯಾ, ಇಲ್ಲಿಯವರೆಗೆ ಕೇವಲ 150ರಿಂದ 180 ಕೋಟಿ ರೂಪಾಯಿಗಳಷ್ಟು ಮಾತ್ರ ಕಡಿತ ಮಾಡಲು ಸಾಧ್ಯವಾಗಿದೆ.

ಇದಕ್ಕಿಂತ ಮೊದಲು ಮುಖ್ಯಕಾರ್ಯದರ್ಶಿ ಕೆ.ಎಂ.ಚಂದ್ರಶೇಖರ್ ನೇತೃತ್ವದ ಸಮಿತಿ, ವೆಚ್ಚಕಡಿತಗೊಳಿಸಿ ಆದಾಯವನ್ನು ಹೆಚ್ಚಿಸುವ ಷರತ್ತಿನ ಮೇಲೆ ಮುಂಬರುವ ಮೂರು ವರ್ಷಗಳಲ್ಲಿ 5 ಸಾವಿರ ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡಲು ಸರಕಾರಕ್ಕೆ ಶಿಫಾರಸು ಮಾಡಿತ್ತು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಏರ್ಇಂಡಿಯಾ, ಸರಕಾರ, ಹೂಡಿಕೆ, ನಷ್ಟ