ರೈಲ್ವೆ ಬಜೆಟ್ ಮಂಡನೆಗೆ ಕೇವಲ ಒಂದು ವಾರವಿರುವಂತೆ,ರೈಲ್ವೆ ಅಧಿಕಾರಿಗಳು ಅಂಕಿ ಅಂಶಗಳನ್ನು ಬಿಡುಗಡೆ ಮಾಡಿದ್ದು, ಜನೆವರಿ ಅಂತ್ಯಕ್ಕೆ ಸರಕುಸಾಗಾಣೆ ಆದಾಯದಲ್ಲಿ ಶೇ.9ರಷ್ಟು ಹೆಚ್ಚಳವಾಗಿ 47,283ಕೋಟಿ ರೂಪಾಯಿಗಳಿಗೆ ತಲುಪಿದೆ.
ಕಳೆದ ವರ್ಷದ 10 ತಿಂಗಳ ಅವಧಿಯಲ್ಲಿ 43,212.72 ಕೋಟಿ ರೂಪಾಯಿ ಆದಾಯಕ್ಕೆ ಹೋಲಿಸಿದಲ್ಲಿ, ಪ್ರಸಕ್ತ ಆರ್ಥಿಕ ಸಾಲಿನ ಆದಾಯದಲ್ಲಿ ಶೇ.9.32ರಷ್ಟು ಹೆಚ್ಚಳವಾಗಿ 47,238.72 ಕೋಟಿ ರೂಪಾಯಿಗಳಿಗೆ ತಲುಪಿದೆ.
ಕಳೆದ ವರ್ಷದ ಅವಧಿಯಲ್ಲಿ 681.28 ಮಿಲಿಯನ್ ಟನ್ ಸರಕು ಸಾಗಾಣೆ ಮಾಡಲಾಗಿತ್ತು.ಪ್ರಸಕ್ತ 10 ತಿಂಗಳ ಅವಧಿಯಲ್ಲಿ ಸರಕು ಸಾಗಾಣೆಯಲ್ಲಿ ಶೇ.7.29ರಷ್ಟು ಏರಿಕೆಯಾಗಿ, 730.96 ಮಿಲಿಯನ್ ಟನ್ ಸರಕು ಸಾಗಾಣೆ ಮಾಡಲಾಗಿದೆ. ಎಂದು ರೈಲ್ವೆ ಮೂಲಗಳು ತಿಳಿಸಿವೆ.
ಅಹಾರ ಧಾನ್ಯಗಳು ಪೆಟ್ರೋಲಿಯಂ, ಸಿಮೆಂಟ್, ಕಬ್ಬಿಣದ ಅದಿರು ಕಲ್ಲಿದ್ದಲು ಸಾಗಾಣೆಯಿಂದಾಗಿ, ಕೇವಲ ಜನೆವರಿ ತಿಂಗಳೊಂದರಲ್ಲಿ 5091.89 ಕೋಟಿ ರೂಪಾಯಿಗಳಷ್ಟು ಆದಾಯ ಗಳಿಸಿದೆ ಎಂದು ಅಧಿಕಾರಿಗಳು ವಿವರಣೆಗಳನ್ನು ನೀಡಿದ್ದಾರೆ.