ಅಹಾರ ಧಾನ್ಯಗಳ ದರ ನಿರಂತರವಾಗಿ ಏರಿಕೆ ಕಾಣುತ್ತಿದ್ದರೂ ಪ್ರಸಕ್ತ ಆರ್ಥಿಕ ಸಾಲಿನ ಅಂತ್ಯಕ್ಕೆ ಹಣದುಬ್ಬರ ದರ ಶೇ.8.5ಕ್ಕೆ ತಲುಪಲಿದೆ ಎನ್ನುವ ಸಮೀಕ್ಷೆಗೆ ಭಾರತೀಯ ರಿಸರ್ವ್ ಬ್ಯಾಂಕ್ ಬದ್ಧವಾಗಿದೆ ಎಂದು ಆರ್‌ಬಿಐ ಮೂಲಗಳು ತಿಳಿಸಿವೆ.
ಹಣದುಬ್ಬರ ಏರಿಳಿತವನ್ನು ಗಮನಿಸುವುದು ನಿರಂತರ ಪ್ರಕ್ರಿಯೆಯಾಗಿದೆ. ನಾವು ಮೊದಲು ಹೇಳಿದಂತೆ ಹಣದುಬ್ಬರ ದರ ಮಾರ್ಚ್ 2010ರ ಮುಕ್ತಾಯಕ್ಕೆ ಶೇ.8.5ಕ್ಕೆ ತಲುಪುವ ನಿರೀಕ್ಷೆಯಿದೆ ಎಂದು ಆರ್‌ಬಿಐ ಗವರ್ನರ್ ಡಿ.ಸುಬ್ಬಾರಾವ್ ತಿಳಿಸಿದ್ದಾರೆ.
ಆರ್‌ಬಿಐ ಗವರ್ನರ್ ಸುಬ್ಬಾರಾವ್ ಮಾತನಾಡಿ, ಮುಂಬರುವ ದಿನಗಳಲ್ಲಿ ಹಣದುಬ್ಬರದಲ್ಲಿ ಇಳಿಕೆಯಾಗಿ ಶೇ.8.56ಕ್ಕೆ ಸ್ಥಗಿತಗೊಳ್ಳಲಿದೆ
ಮುಂಬರುವ ಜುಲೈ 2010ರ ವೇಳೆಗೆ ಹಣದುಬ್ಬರ ದರದಲ್ಲಿ ಇಳಿಕೆಯಾಗುವ ನಿರೀಕ್ಷೆಗಳಿವೆ. ಆದರೆ ಪ್ರಸ್ತುತ ಪರಿಸ್ಥಿತಿಯಲ್ಲಿ ಭವಿಷ್ಯ ಹೇಳಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.