ಅಮೆರಿಕದ ಸೆಂಟ್ರಲ್ ಬ್ಯಾಂಕ್, ಬ್ಯಾಂಕ್‌ಗಳಿಗೆ ನೀಡುವ ಸಾಲದ ಬಡ್ಡಿ ದರದಲ್ಲಿ ರಿಯಾಯತಿ ಘೋಷಿಸಿರುವುದರಿಂದ, ಡಾಲರ್ ಮೌಲ್ಯದಲ್ಲಿ ಏರಿಕೆಯಾಗಿ ರೂಪಾಯಿ 16 ಪೈಸೆ ಕುಸಿತ ಕಂಡಿದೆ.
ವಿದೇಶಿ ವಿನಿಮಯ ಮಾರುಕಟ್ಟೆಯ ಹಿಂದಿನ ದಿನದ ವಹಿವಾಟಿನ ಮುಕ್ತಾಯಕ್ಕೆ ಡಾಲರ್ ಎದುರಿಗೆ ರೂಪಾಯಿ ಮೌಲ್ಯದಲ್ಲಿ 18 ಪೈಸೆ ಕುಸಿತ ಕಂಡು 46.28/29 ರೂಪಾಯಿಗಳಿಗೆ ತಲುಪಿತ್ತು. ಇಂದಿನ ಆರಂಭಿಕ ವಹಿವಾಟಿನಲ್ಲಿ ಮತ್ತೆ 16 ಪೈಸೆ ಕುಸಿತ ಕಂಡು 46.44 ರೂಪಾಯಿಗಳಿಗೆ ತಲುಪಿದೆ.
ಅಮೆರಿಕದ ಸೆಂಟ್ರಲ್ ಬ್ಯಾಂಕ್, ಬ್ಯಾಂಕ್‌ಗಳಿಗೆ ನೀಡುವ ಸಾಲದ ಬಡ್ಡಿ ದರದಲ್ಲಿ ರಿಯಾಯತಿ ಘೋಷಿಸಿರುವುದರಿಂದ, ಡಾಲರ್ ಎದುರಿಗೆ ಏಷ್ಯನ್ ಕರೆನ್ಸಿಗಳು ದುರ್ಬಲಗೊಂಡಿದ್ದರಿಂದ ರೂಪಾಯಿ ಮೌಲ್ಯದ ಕುಸಿತಕ್ಕೆ ಕಾರಣವಾಗಿದೆ ಎಂದು ಡೀಲರ್‌ಗಳು ತಿಳಿಸಿದ್ದಾರೆ.
ಏತನ್ಮಧ್ಯೆ, ಮುಂಬೈ ಶೇರುಪೇಟೆಯ ಸೂಚ್ಯಂಕ 173 ಪಾಯಿಂಟ್‌ಗಳ ಕುಸಿತ ಕಂಡು, 16,154.16 ಅಂಕಗಳಿಗೆ ತಲುಪಿದೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ.