ದೇಶದ ಕಾರು ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಮಾರುತಿ ಸುಝುಕಿ ಇಂಡಿಯಾ, ಮುಂಬರುವ ಮೂರು ವರ್ಷಗಳಲ್ಲಿ 3 ಸಾವಿರ ಉದ್ಯೋಗಿಗಳನ್ನು ನೇಮಕ ಮಾಡಲು ಉದ್ದೇಶಿಸಿದೆ ಎಂದು ಕಂಪೆನಿಯ ಅಧಿಕಾರಿಗಳು ತಿಳಿಸಿದ್ದಾರೆ.
ದೇಶದಲ್ಲಿ ಶೋರೂಂಗಳನ್ನು ಹಾಗೂ ಘಟಕಗಳನ್ನು ಹೆಚ್ಚಿಸಲು, 2 ಬಿಲಿಯನ್ ಡಾಲರ್ ರೂಪಾಯಿಗಳಷ್ಟು ಹೂಡಿಕೆ ಮಾಡಲು ಉದ್ದೇಶಿಸಿದೆ ಎಂದು ಕಂಪೆನಿಯ ವ್ಯವಸ್ಥಾಪಕ ಕಾರ್ಯನಿರ್ವಾಹಕ ಅಧಿಕಾರಿ ಎಸ್.ವೈ ಸಿದ್ದಿಕಿ ಹೇಳಿದ್ದಾರೆ. ಪ್ರಸಕ್ತ ಕಂಪೆನಿಯಲ್ಲಿ 7500 ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿದ್ದಾರೆ.
ಇದಕ್ಕಿಂತ ಮೊದಲು, ಯುರೋಪ್ ಮತ್ತು ಅಮೆರಿಕದಿಂದ 950 ತಜ್ಞರನ್ನು ನೇಮಕ ಮಾಡಿಕೊಳ್ಳುವುದಾಗಿ ಕಂಪೆನಿ ಹೇಳಿಕೆ ನೀಡಿತ್ತು.
ಮುಂದಿನ ವರ್ಷದ ಅವಧಿಯಲ್ಲಿ, ಸುಮಾರು 800 ಮಂದಿ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲಾಗುವುದು ಎಂದು ಕಂಪೆನಿಯ ಮನವ ಸಂಪನ್ಮೂಲ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.