ದೇಶದ ಆರ್ಥಿಕ ವೃದ್ಧಿ ದರದಲ್ಲಿ ಚೇತರಿಕೆಯಾಗುತ್ತಿದೆ. ಆದರೆ ಹಣದುಬ್ಬರವೂ ಕೂಡಾ ಏರಿಕೆ ಕಾಣುತ್ತಿರುವುದು ಕಳವಳಕ್ಕೆ ಕಾರಣವಾಗಿದೆ ಎಂದು ಪ್ರಧಾನಮಂತ್ರಿಗಳ ಆರ್ಥಿಕ ಸಲಹಾ ಸಮಿತಿಯ ಮುಖ್ಯಸ್ಥ ಸಿ.ರಂಗರಾಜನ್ ಹೇಳಿದ್ದಾರೆ.
ದೇಶದ ಜಿಡಿಪಿ ದರ 2010-11ರಲ್ಲಿ ಶೇ.8.2ರಷ್ಟು ಹಾಗೂ 2011-12ರಲ್ಲಿ ಶೇ.9ರಷ್ಟು ಜಿಡಿಪಿ ದರವನ್ನು ಹೊಂದುವ ನಿಟ್ಟಿನಲ್ಲಿ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ರಂಗರಾಜನ್ ತಿಳಿಸಿದ್ದಾರೆ.
ಕೇಂದ್ರ ಲೆಕ್ಕ ಪರಿಶೋಧಕ ಸಂಸ್ಥೆಯ ಪ್ರಕಾರ ದೇಶದ ಆರ್ಥಿಕ ವೃದ್ಧಿ ದರ, ಪ್ರಸಕ್ತ ಆರ್ಥಿಕ ಸಾಲಿನ ಅಂತ್ಯಕ್ಕೆ ಶೇ.7.2ಕ್ಕೆ ತಲುಪಲಿದೆ.ಪ್ರಧಾನಮಂತ್ರಿಗಳ ಆರ್ಥಿಕ ಸಲಹಾ ಸಮಿತಿ ಜಿಡಿಪಿ ದರ ಶೇ.6.5ಕ್ಕೆ ತಲುಪಲಿದೆ ಎಂದು ಕೆಲ ದಿನಗಳ ಹಿಂದೆ ಹೇಳಿಕೆ ನೀಡಿತ್ತು.
ದೇಶದಲ್ಲಿ ಏರಿಕೆ ಕಾಣುತ್ತಿರುವು ಹಣದುಬ್ಬರ ಬೃಹತ್ ಸಮಸ್ಯೆಯಾಗಿ ಕಾಡುತ್ತಿದ್ದು,ಮುಂದಿನ ಆರ್ಥಿಕ ಸಾಲಿನಲ್ಲಿ ವಿಸ್ತರಿಸುವ ಸಾಧ್ಯತೆಗಳಿರುವುದರಿಂದ, ಹಣದುಬ್ಬರ ನಿಯಂತ್ರಣಕ್ಕೆ ಅಗತ್ಯ ಕಠಿಣ ಕ್ರಮಕೈಗೊಳ್ಳಬೇಕಾಗಿದೆ ಸಿ.ರಂಗರಾಜನ್ ತಿಳಿಸಿದ್ದಾರೆ.