ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಮಾರ್ಚ್ ಅಂತ್ಯಕ್ಕೆ ಶೇ.10ರಷ್ಟು ಹಣದುಬ್ಬರ ದರ (Inflation , Assocham, Food items)
Bookmark and Share Feedback Print
 
ಅಹಾರ ವಸ್ತುಗಳ ದರ ಏರಿಕೆ ಹಾಗೂ ಅಸಮರ್ಪಕ ಸರಬರಾಜು ವ್ಯವಸ್ಥೆಯಿಂದಾಗಿ, ಹಣದುಬ್ಬರ ದರ ಮಾರ್ಚ್ ಅಂತ್ಯಕ್ಕೆ ಶೇ.10ಕ್ಕೆ ತಲುಪುವ ನಿರೀಕ್ಷೆಗಳಿವೆ ಎಂದು ಮೂಲಗಳು ತಿಳಿಸಿವೆ.

ಏತನ್ಮಧ್ಯೆ, ಜನೆವರಿ ತಿಂಗಳಲ್ಲಿ ಶೇ.8.56ರಷ್ಟು ಏರಿಕೆ ಕಂಡ ಹಣದುಬ್ಬರ ದರ, ಕಳೆದ 13 ತಿಂಗಳಲ್ಲಿ ಗರಿಷ್ಠ ದಾಖಲೆಯಾಗಿದೆ. ಮುಂದಿನ ವರ್ಷದ ಆರ್ಥಿಕ ಸಾಲಿನಲ್ಲಿ ಹಣದುಬ್ಬರ ದರ ಸರಾಸರಿ ಶೇ.5.5ಕ್ಕೆ ತಲುಪುವ ಸಾಧ್ಯತೆಗಳಿವೆ.

ಅಹಾರ ವಸ್ತುಗಳ ದರ ಏರಿಕೆ ಹಾಗೂ ಅಸಮರ್ಪಕ ಸರಬರಾಜು ವ್ಯವಸ್ಥೆ, ಕಳೆದ ವರ್ಷದ ಮುಂಗಾರಿನಲ್ಲಿ ಮಳೆಯ ಕೊರತೆಯಿಂದ ಬರಗಾಲ ಎದುರಾಗಿರುವುದರಿಂದ, ಹಣದುಬ್ಬರ ನಿರಂತರ ಏರಿಕೆ ಕಾಣಲು ಕಾರಣವಾಗಿದೆ ಎಂದು ಕೈಗಾರಿಕೋದ್ಯಮ ಸಂಘಟನೆಯಾದ ಅಸೋಚಾಮ್ ತಿಳಿಸಿದೆ.

ಸಾಮಾಜಿಕ ಕ್ಷೇತ್ರದ ವಿಸ್ತರಣೆಯಿಂದಾಗಿ ಗ್ರಾಮೀಣಭಾಗದ ಜನತೆಯ ಆದಾಯ ಮಟ್ಟ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ವೆಚ್ಚದಲ್ಲಿ ಏರಿಕೆಯಾಗಿ ಬೇಡಿಕೆಯನ್ನು ಹೆಚ್ಚಿಸುತ್ತಿವೆ.ಸರಕಾರಿ ಅಧಿಕಾರಿಗಳ ವೇತನದಲ್ಲಿ ಕೂಡಾ ಏರಿಕೆಯಾಗುತ್ತಿರುವುದರಿಂದ, ಪಟ್ಟಣಗಳಲ್ಲಿ ಕೂಡಾ ಅಹಾರ ಬೇಡಿಕೆಯಲ್ಲಿ ಹೆಚ್ಚಳವಾಗುತ್ತಿದೆ ಎಂದು ಅಸೋಚಾಮ್ ತಿಳಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ