ಜಾಗತಿಕ ಮಾರುಕಟ್ಟೆಗಳ ಸ್ಥಿರ ವಹಿವಾಟಿನಿಂದಾಗಿ, ಕಳೆದ ಎರಡು ದಿನಗಳಿಂದ ಕುಸಿತದತ್ತ ಸಾಗಿದ್ದ ಚಿನ್ನದ ದರ,ಇಂದಿನ ವಹಿವಾಟಿನಲ್ಲಿ ಪ್ರತಿ10ಗ್ರಾಂಗೆ 60 ರೂಪಾಯಿ ಏರಿಕೆಯಾಗಿ 16,860 ರೂಪಾಯಿಗಳಿಗೆ ತಲುಪಿದೆ.
ಸ್ಟ್ಯಾಂಡರ್ಡ್ ಚಿನ್ನ ಹಾಗೂ ಆಭರಣ ದರದಲ್ಲಿ ಪ್ರತಿ10 ಗ್ರಾಂಗೆ 60 ರೂಪಾಯಿ ಏರಿಕೆಯಾಗಿ ಕ್ರಮವಾಗಿ 16,860 ಮತ್ತು 16,710 ರೂಪಾಯಿಗಳಿಗೆ ತಲುಪಿದೆ.
ಸಾಗರೋತ್ತರ ಮಾರುಕಟ್ಟೆಗಳ ಚೇತರಿಕೆ ಹಾಗೂ ಖರೀದಿಯ ಬೆಂಬಲದಿಂದಾಗಿ ಚಿನ್ನದ ದರದಲ್ಲಿ ಏರಿಕೆಯಾಗಿದೆ ಎಂದು ಮಾರುಕಟ್ಟೆಯ ವರ್ತಕರು ತಿಳಿಸಿದ್ದಾರೆ.
ಸಾಗರೋತ್ತರ ಮಾರುಕಟ್ಟೆಯಲ್ಲಿ ಚಿನ್ನದ ದರ ಪ್ರತಿ ಔನ್ಸ್‌ಗೆ 40 ಸೆಂಟ್‌ಗಳಷ್ಟು ಏರಿಕೆಯಾಗಿ 1,109.10 ಡಾಲರ್‌ಗಳಿಗೆ ತಲುಪಿದೆ.
ಏತನ್ಮಧ್ಯೆ, ಬೆಳ್ಳಿಯ ದರ ಸ್ಥಿರವಾಗಿದ್ದು, ಪ್ರತಿ ಕೆಜಿಗೆ 25,050 ರೂಪಾಯಿಗಳಿಗೆ ತಲುಪಿದೆ. ಬೆಳ್ಳಿ ನಾಣ್ಯ(100)ದರ 33,100 ರೂಪಾಯಿಗಳಿಗೆ ತಲುಪಿದೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ.